ವರ್ಕಾಡಿಯಲ್ಲಿ ಆಟಿದ ಕೂಟ

ವರ್ಕಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವರ್ಕಾಡಿ ಒಕ್ಕೂಟದ ನೇತೃತ್ವದಲ್ಲಿ ವರ್ಕಾಡಿ ಕಾಪ್ರಿ ಶಾಲೆಯಲ್ಲಿ ಆಟಿದ ಕೂಟ ಜರಗಿತು. ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ಎಸ್ ಬೇರಿಂಜೆ ಅಧ್ಯಕ್ಷತೆ ವಹಿಸಿದರು. ಯೋಜನಾಧಿಕಾರಿ ಶಶಿಕಲಾ ಸುವರ್ಣ, ಮೇಲ್ವಿಚಾರಕ ಕೃಷ್ಣಪ್ಪ ಪೂಜಾರಿ, ಮುಖ್ಯೋಪಾ ಧ್ಯಾಯಿನಿ ಸುಜಾತ, ವಲಯಾಧ್ಯಕ್ಷ ಸೋಮಶೇಖರ, ಸ್ಥಾಪಕಾಧ್ಯಕ್ಷ ಭಾಸ್ಕರ ಟೈಲರ್,  ಇಸ್‌ಡೋರ್ ಡಿ’ಸೋಜಾ, ಚಂದ್ರಹಾಸ ಶೆಟ್ಟಿ, ದಿನೇಶ್ ಪಾವೂರು ಮಾತನಾ ಡಿದರು. ಮಡಿಕತ್ತಾಯ ದೈವಸ್ಥಾನದ ಮೊಕ್ತೇಸರ ವಿ.ಎಸ್. ಬೇರಿಂಜೆ ಆಟಿ ತಿಂಗಳ ಬಗ್ಗೆ ವಿಚಾರ ಮಂಡಿಸಿದರು. ವರ್ಕಾಡಿ ಒಕ್ಕೂಟದಲ್ಲಿ ದುಡಿದು ನಿವೃತ್ತಿ ಹೊಂದಿರುವ ಫ್ರಾನ್ಸಿಸ್ ಮೊಂತೇರೊ ದಂಪತಿಯನ್ನು ಗೌರವಿಸಲಾಯಿತು. ಸೇವಾ ನಿರತೆಯಾಗಿ ನಿಯುಕ್ತಿಗೊಂಡ ಮಲ್ಲಿಕಾರನ್ನು ಸ್ವಾಗತಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

You cannot copy contents of this page