ವರ್ಕಾಡಿಯಲ್ಲಿ ಕ್ರಿಸ್ಮಸ್ ಸೌಹಾರ್ದಕೂಟ

ವರ್ಕಾಡಿ: ಶಾಂತಿ ಕಾಪಾಡಬೇಕೆಂದಾದಲ್ಲಿ ಸೌಹಾರ್ದ, ಬಂಧುತ್ವ ಅತ್ಯಗತ್ಯವಾಗಿರಬೇಕೆಂದು ಅತಿ ವಂ| ಸ್ವಾಮಿ ಬಾಸಿಲ್‌ವಾಸ್ ನುಡಿದರು. ವರ್ಕಾಡಿ ಇಗರ್ಜಿ, ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಕಳಿಯೂರು, ಕಾಪಿರಿ  ಎಯುಪಿ ಶಾಲೆ, ಸೈಂಟ್ ಮೆರೀಸ್ ಶಾಲೆ, ಅಂತರ ಧರ್ಮೀಯ ಆಯೋಗ ವರ್ಕಾಡಿ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಕೂಟ, ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಂಗಳೂರು ಕ್ರೈಸ್ತ ವಿದ್ಯಾಪೀಠದ ಮುಖ್ಯಸ್ಥ ವಂ| ಐವನ್ ಡಿ’ಸೋಜಾ ಉದ್ಘಾಟಿಸಿ ಮಾತನಾಡಿದರು. ಕ.ಸಾ.ಪ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅತಿಥಿಯಾಗಿ ಭಾಗವಹಿಸಿದರು. ಉಪನ್ಯಾಸಕ ರಜಾಕ್ ಅನಂತಾಡಿ, ಕರ್ನಾಟಕ ಸರಕಾರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎಸ್.ಆರ್. ಸುಬ್ಬಯ್ಯಕಟ್ಟೆ ಶುಭ ಹಾರೈಸಿದರು. ಸಂತೋಷ್ ಡಿ’ಸೋಜಾ, ರಾಜೇಶ್ ಡಿ’ಸೋಜಾ, ಸಿ. ಶಾಂತಿ, ಸಿ. ಮೊಂತಿನ್ ಗೋಮ್ಸ್, ಅಶೋಕ್ ಡಿ’ಸೋಜಾ, ಯೇಸು ಪ್ರಸಾದ್ ಉಪಸ್ಥಿತರಿದ್ದರು. ಸಂಧ್ಯಾ ಡಿ’ಸೋಜಾ ಸ್ವಾಗತಿಸಿ, ಅನಿತಾ ಡಿ’ಸೋಜಾ ವಂದಿಸಿದರು. ಬಳಿಕ ಸೌಹಾರ್ದ ಕ್ರಿಕೆಟ್ ಪಂದ್ಯಾಟ ಜರಗಿತು.

RELATED NEWS

You cannot copy contents of this page