ವರ್ಕಾಡಿ ಕೃಷಿಭವನದ ಛಾವಣಿ ಶೀಟ್ ಗಾಳಿಗೆ ಹಾರುತ್ತಿದೆ: ಪರಿಸರ ನಿವಾಸಿಗಳಿಗೆ ಭೀತಿ

ವರ್ಕಾಡಿ: ಪಂಚಾಯತ್ ವ್ಯಾಪ್ತಿಯ ಬೇಕರಿ ಜಂಕ್ಷನ್ ಬಳಿ ಇರುವ ಹಳೆಯ ಕೃಷಿಭವನ ಶೋಚನೀಯ ಸ್ಥಿತಿಯಲ್ಲಿದೆ. ಕೃಷಿಗೆ ಬಿಸಿಲು ಮಳೆ ಅಗತ್ಯವಿದ್ದು, ಆದರೆ ಕೃಷಿಭವನಕ್ಕೂ ಇದೇ ಸ್ಥಿತಿ ಉಂಟಾಗಿರುವುದು ವರ್ಕಾಡಿಯಲ್ಲಿ ಮಾತ್ರವಾಗಿರಬಹುದೆಂದು ಸ್ಥಳೀಯರು ದೂರುತ್ತಾರೆ. ಕೃಷಿ ಭವನದ ಮೇಲ್ಛಾವಣಿಯ ಶೀಟ್‌ಗಳು ತುಕ್ಕು ಹಿಡಿದು ನಾಶವಾಗುತ್ತಿದ್ದು, ಇದು ಗಾಳಿಗೆ ಹಾರಿ ದೂರದ ಸ್ಥಳಗಳಿಗೂ ಬೀಳುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಈ ಪರಿಸರದ ಜನರು ಯಾವಾಗ ಶೀಟ್ ಹಾರಿ ಬಂದು ತಲೆಗೆ ಬೀಳುತ್ತದೋ ಎಂಬ ಭೀತಿ ಯಲ್ಲಿರುವುದಾಗಿ ತಿಳಿಸುತ್ತಿದ್ದು, ಈ ಪರಿಸರದಲ್ಲಿ ಮಕ್ಕಳು ಆಟವಾಡುತ್ತಿ ದ್ದಾರೆನ್ನಲಾಗಿದೆ. ಪರಿಸರ ನಿವಾಸಿಗಳಿಗೆ  ಜೀವಭಯ ಉಂಟಾಗುತ್ತಿದ್ದು, ಈ ಸಮಸ್ಯೆ ಪರಿಹರಿಸಲು ಅಧಿಕಾರಿಗಳಲ್ಲಿ ಹಲವು ಬಾರಿ ಆಗ್ರಹಿಸಿದರೂ ಯಾವುದೇ ಫಲ ಉಂಟಾಗಿಲ್ಲವೆಂದು ಪರಿಸರವಾಸಿಗಳು ತಿಳಿಸಿದ್ದಾರೆ.

You cannot copy contents of this page