ವರ್ಕಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬಾವಳಿಗುಳಿ ಇದರ ಆಶ್ರಯದಲ್ಲಿ ಸೆ. 7ರಂದು ಬಾವಳಿಗುಳಿ ವಠಾರದಲ್ಲಿ ಶ್ರೀ ಗಣೇಶೋತ್ಸವ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಜರಗಿತು. ಸೇವಾ ಸಮಿತಿ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಹೊಳ್ಳ ಮರಿಕಾಪು ಬೀಡು ಅಧ್ಯಕ್ಷತೆಯನ್ನು ವಹಿಸಿದ್ದರು. ವರ್ಕಾಡಿ ಸಂತೋಷ ತಂತ್ರಿ ದೀಪ ಬೆಳಗಿಸಿ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸೇವಾ ಸಮಿತಿ ಅಧ್ಯಕ್ಷÀ ವಿಶ್ವನಾಥ ರೈ, ಗೌರವ ಸಲಹೆಗಾರ ಶಂಕರನಾರಾಯಣ ಹೊಳ್ಳ ಮರಿಕಾಪು ಬೀಡು, ಪ್ರಧಾನ ಸಂಚಾಲಕ ಹರೀಶ್ ಕನ್ನಿಗುಳಿ, ಉಪಾಧ್ಯಕ್ಷರಾದ ಮನೋಹರ್ ಶೆಟ್ಟಿ ಗುಮ್ಮೆಗುಳಿ ನರಿಂಗಾನ, ಗಂಗಾಧರ ಶೆಟ್ಟಿ ನೆತ್ತಿಲ, ಮೋಹನ್ ಮಾಡ ಕುಂಜತೂರು, ವಿಜೇಶ್ ಶೆಟ್ಟಿ ಪೂಂಜಾರ ಮನೆ, ಸದಾನಂದ ಶೆಟ್ಟಿ ಬಾವಳಿಗುಳಿ, ಪವನ್ ಬೋಳದ ಪದವು, ವಿಜಯನ್ ಬೋಳದ ಪದವು, ರವಿ ಬೊಳದ ಪದವು, ಅಲ್ಲದೆ ಪ್ರಿಯದರ್ಶಿನಿ ಸ್ಪೋರ್ಟ್ಸ್ ಕ್ಲಬ್, ಶಿವಾಜಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ಸೇವಾ ಸಮಿತಿಯ ಕೋಶಾಧಿಕಾರಿ ರವಿಮುಡಿಮಾರು ಸ್ವಾಗತಿಸಿ, ವಂದಿಸಿದರು.
