ವರ್ಕಾಡಿ ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್, ಶ್ರೀಮಾತಾ ಸೇವಾಶ್ರಮದ ದಶಮಾನೋತ್ಸವ

ವರ್ಕಾಡಿ: ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀಮಾತಾ ಸೇವಾಶ್ರಮ ವರ್ಕಾಡಿ ಇದರ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಸಂಕೀರ್ತನೆ ಇದೇ ವೇಳೆ ಜರಗಿತು. ಪುರೋಹಿತ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ಗಣಹೋಮ, ಚಂಡಿಕಾಯಾಗ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆ ಕೊಡ್ಲಮೊಗರು ಇದರ ನಿವೃತ್ತ ಪ್ರಾಂಶುಪಾಲ ಚಂದ್ರ ಕುಮಾರ್.ಕೆ ಅಧ್ಯಕ್ಷತೆ ವಹಿಸಿದ್ದರ. ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಇದರ ಸಂಚಾಲಕಿಯಾದ ಡಾ. ಶಾರದಾ ಉದಯಕುಮಾರ್ ಉದ್ಘಾಟಿಸಿದರು. ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಸಮಾಜಕ್ಕೆ ನಾವೇನು ಮಾಡಬೇಕು ಎಂಬ ಚಿಂತನೆಯನ್ನು ಮಾಡಿ ಜೀವನದಲ್ಲಿ ಸಮಾಜಕ್ಕೆ ತನ್ನಿಂದಾಗುವ ಸೇವೆ ನೀಡಿದರೆ ಅದುವೇ ಸರ್ವಶ್ರೇಷ್ಠ ಜೀವನ. ಈ ನಿಟ್ಟಿನಲ್ಲಿ ಶ್ರೀಮಾತಾ ಸೇವಾಶ್ರಮ ಕಾರ್ಯಾಚರಿಸುತ್ತಿದೆ ಎಂದು  ಆಶ್ರಮದ ಕಾರ್ಯವನ್ನು ಶ್ಲಾಘಿಸಿದರು. ಹಿಂದೂ ಸಮಾಜ ಮತ್ತು ಪುಣ್ಯಭೂಮಿ ಭಾರತ ಉಳಿಯಬೇಕಾದರೆ ಕನಿಷ್ಠಪಕ್ಷ ಮೂರು ಮಕ್ಕಳನ್ನಾದರೂ ಪಡೆಯಬೇಕು. ಅವರಿಗೆ ಹಿಂದು ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಜ್ಞಾನ ಕೊಡುವಂತಹ ಶಾಲೆಗಳಲ್ಲಿಯೇ ಶಿಕ್ಷಣವನ್ನು ಕೊಡಿಸಬೇಕು. ನಮ್ಮ ವ್ಯವಹಾರವು  ಲಾಭವಾಗಲಿ ನಷ್ಟವಾಗಲಿ ನಮ್ಮವರಲ್ಲಿಯೇ ಮಾಡಬೇಕು ಎಂದರು.  ವೀರಪ್ಪ ಅಂಬಾರು, ಮೀರಾ ಆಳ್ವ, ದಶಮಾನೋತ್ಸವ ಸಮಿತಿ ಅಧ್ಯಕ್ಷ ರವಿ ಮುಡಿಮಾರು ಉಪಸ್ಥಿತರಿದ್ದರು. ಆಶ್ರಮದ ಟ್ರಸ್ಟ್‌ನ ಅಧ್ಯಕ್ಷ ಟಿ. ನಾರಾಯಣ ಭಟ್ ತಲೆಂಗಳ ಸ್ವಾಗತಿಸಿದರು.

ಪುಷ್ಪ ಮನೋಹರ್ ಶೆಟ್ಟಿ ಕೆದುಂಬಾಡಿ ವರದಿ ಮಂಡಿಸಿದರು. ಅಶೋಕ್ ಮಾಸ್ತರ್ ಬಾಡೂರು ನಿರ್ವಹಿಸಿ, ಯತಿರಾಜ್ ಶೆಟ್ಟಿ ವಂದಿಸಿದರು.

You cannot copy contents of this page