ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಕಾಂಗ್ರೆಸ್ ಭಿನ್ನಮತೀಯ- ಬಿಜೆಪಿ ಮೈತ್ರಿಗೆ

ಮಂಜೇಶ್ವರ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ್ನು ಕಾಂಗ್ರೆಸ್ ಭಿನ್ನಮತೀಯ- ಬಿಜೆಪಿ ಮೈತ್ರಿ ಕೂಟ ವಶಪಡಿಸಿದೆ.

ಸಿಪಿಎಂ- ಕಾಂಗ್ರೆಸ್ – ಲೀಗ್ ಮೈತ್ರಿಕೂಟ ವನ್ನು ಕಾಂಗ್ರೆಸ್ ಭಿನ್ನಮತೀಯರು, ಬಿಜೆಪಿ ಸೇರಿ ಮಣ್ಣುಪಾಲಾಗಿಸಿದೆ. ೧೧ ಮಂದಿಯ ಆಡಳಿತ ಸಮಿತಿಯಲ್ಲಿ ಕಾಂಗ್ರೆಸ್ ಭಿನ್ನಮತೀಯರಿಗೆ ಏಳು, ಬಿಜೆಪಿ ನಾಲ್ಕು ಸೀಟಿನಲ್ಲಿ ಜಯ ಗಳಿಸಿದೆ. ಸಿಪಿಎಂ- ಕಾಂಗ್ರೆಸ್- ಲೀಗ್- ಸಿಪಿಐ- ಕೇರಳ ಕಾಂಗ್ರೆಸ್ ಮೈತ್ರಿಯ ಎಲ್ಲಾ ಉಮೇದ್ವಾರರನ್ನು ಸರಾಸರಿ ೫೦೦ರಷ್ಟು ಮತಗಳ ಅಂತರದಲ್ಲಿ ವಿರುದ್ಧ ವಿಭಾಗ ಸೋಲಿಸಿದೆ. ಕಾಂಗ್ರೆಸ್ ಭಿನ್ನಮತೀಯ ವಿಭಾಗದ ಮುಹಮ್ಮದ್ ಹನೀಫ್, ಮೂಸಾ ಕುಂಞಿ, ನಿಕೋಲಸ್ ಮೊಂತೇರೋ, ವಿನೋದ್ ಕುಮಾರ್, ರಾಬಿಯ, ಸುನಿತ ಡಿ’ಸೋಜಾ, ಪ್ರವೀಣ್ ಎಂಬಿವರು ಬಿಜೆಪಿಯ ಜಗದೀಶ್, ಸತೀಶ್, ಸತ್ಯನಾರಾಯಣ ಭಟ್, ತುಳಸಿ ಕುಮಾರಿ ಎಂಬಿವರು ಜಯಗಳಿಸಿದ್ದಾರೆ.

ಬ್ಯಾಂಕ್ ಅಧ್ಯಕ್ಷರಾಗಿ ಮುಹಮ್ಮದ್ ಹನೀಫರನ್ನು ಆಯ್ಕೆ ಮಾಡಲು ತೀರ್ಮಾನಿಸಲಾ ಗಿದೆ. ಉಪಾಧ್ಯಕ್ಷ ಹುದ್ದೆ ಬಿಜೆಪಿಗೆ ಲಭಿಸಲಿದೆ.

ಬಿಜೆಪಿ- ಕಾಂಗ್ರೆಸ್ ಭಿನ್ನಮತೀಯ ಮೈತ್ರಿಕೂಟಕ್ಕೆ ಚುಕ್ಕಾಣಿ ಹಿಡಿದಿರುವುದಾಗಿ ಆರೋಪಿಸಿ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ ಸಹಿತ ಮೂರು ಮಂದಿ ಕಾಂಗ್ರೆಸ್ ಮುಖಂಡರನ್ನು ಪಕ್ಷದ ಮಂಜೇಶ್ವರ ಬ್ಲೋಕ್ ಅಧ್ಯಕ್ಷ ಸೋಮಪ್ಪ ಕಾಂಗ್ರೆಸ್‌ನ ಭಿನ್ನಮತೀಯ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದರು. ಕಾಂಗ್ರೆಸ್‌ನ ನಾಲ್ಕು ಅಭ್ಯರ್ಥಿಗಳನ್ನು ಡಿಸಿಸಿ ಅಧ್ಯಕ್ಷರೂ ವಜಾ ಮಾಡಿದ್ದರು.

ಕಾಂಗ್ರೆಸ್- ಲೀಗ್- ಸಿಪಿಎಂ ಮೈತ್ರಿ ಕೂಟದಲ್ಲಿ ಅತ್ಯಂತ ಹೆಚ್ಚು ಮತ ಲಭಿಸಿರುವುದು ಆರ್. ತನುಜರಿಗೆ ೯೮೮ ಮತ ಕಾಂಗ್ರೆಸ್ ಬಿಜೆಪಿ ಮೈತ್ರಿಯಲ್ಲಿ ಅತ್ಯಂತ ಹೆಚ್ಚು ಮತ ಲಭಿಸಿರುವುದು ೨೦ ವರ್ಷದಿಂದ ಇದೇ ಬ್ಯಾಂಕ್‌ನ ನಿರ್ದೇಶಕ ರಾಗಿದ್ದ ಮುಹಮ್ಮದ್ ಹನೀಫ್‌ರಿಗಾಗಿದೆ ೧೪೩೬ ಮತ. ಪ್ರತಿ ಉಮೇದ್ವಾರರಿಗೂ ಲಭಿಸಿದ ಮತಗಳ ವಿವರ ಇಂತಿದೆ. ಬಿಜೆಪಿ ಕಾಂಗ್ರೆಸ್ ಭಿನ್ನ ಮತೀಯ ಮೈತ್ರಿಯ ಅಭ್ಯರ್ಥಿಗಳಾಗಿರುವ ಮೂಸ ಕುಂಞಿಗೆ ೧೩೬೮, ನಿಕೋಲಸ್ ಮೊಂತೇರೋ- ೧೩೮೨, ವಿನೋದ್ ಕುಮಾರ್- ೧೩೭೪, ರಾಬಿಯ -೧೪೧೯, ಸುನಿತಾ ಡಿ’ಸೋಜಾ- ೧೪೨೩. ಈ ವಿಭಾಗದ ಪ್ರವೀಣ್ ಚುನಾವಣೆ ಮುಂಚಿತ ಅವಿರೋಧ ಆಯ್ಕೆಯಾಗಿದ್ದಾರೆ.

ಬಿಜೆಪಿಯ ಜಗದೀಶ್ ಸಿ-೧೩೯೦, ಸತೀಶ- ೧೩೫೫, ಸತ್ಯನಾರಾಯಣ ಭಟ್- ೧೩೭೦, ತುಳಸಿ ಕುಮಾರಿ -೧೪೧೭ ಮತ ಲಭಿಸಿದೆ.

ಕಾಂಗ್ರೆಸ್- ಸಿಪಿಎಂ- ಲೀಗ್ ಮೈತ್ರಿ ಅಭ್ಯರ್ಥಿಗಳಿಗೆ ಲಭಿಸಿದ ಮತ ಇಂತಿದೆ. ಅಬ್ದುಲ್ ಖಾದರ್- ೯೪೨, ದಿವಾಕರನ್ ಎಸ್.ಜೆ. -೯೭೭, ಗಣೇಶ್ ಬಿ- ೯೨೬, ರವೀಶ್ ಮೊಂತೇರೊ- ೯೪೦, ಸೀತಾರಾಮ ಪೂಜಾರಿ- ೯೪೦, ಸುರೇಶ್ ವಿ- ೯೧೧, ನಸಿಯ- ೯೫೪, ಸರಿತ ಡಿ’ಸೋಜ- ೯೭೪, ತನುಜ ಆರ್.-೯೮೮, ಜಾಫರ್ ಸಾದಿಖ್- ೯೪೧. ಲೋಕಸಭಾ ಚುನಾವಣೆಗೆ  ರಾಜಕೀಯ ಪಕ್ಷಗಳು ಸಿದ್ಧರಾಗುತ್ತಿರುವಾಗ ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆ ಫಲಿತಾಂಶ ಕಾಂಗ್ರೆಸ್ ನಾಯಕತ್ವಕ್ಕೆ ಸ್ಥಳೀಯ ಸವಾಲಾಗಿ ನೆಗೆದು ನಿಂತಿದೆ.

Leave a Reply

Your email address will not be published. Required fields are marked *

You cannot copy content of this page