ವರ್ಚುವಲ್ ತರಗತಿ ಸೌಕರ್ಯ ಸಿದ್ಧ: ಚುಕ್ಕಿನಡ್ಕದ ಭರತ್‌ಗೆ ಇನ್ನು ಮನೆಯಲ್ಲಿಯೇ ಕಲಿಕೆ ಮುಂದುವರಿಸಲು ವ್ಯವಸ್ಥೆ
ಮಾನ್ಯ: ಮಾನ್ಯ ಜ್ಞಾನೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿಯಾದ ಚುಕ್ಕಿನಡ್ಕದ ಭರತ್ ಕುಮಾರ್‌ಗೆ ಇನ್ನು ಮನೆಯಲ್ಲಿ ಕುಳಿತು ಶಿಕ್ಷಣ ಕೈಗೊಳ್ಳಬಹುದಾಗಿದೆ. ಮನೆಯಾ ಧಾರಿತ ಶಿಕ್ಷಣ ಪಡೆಯುವುದಕ್ಕೆ ಶಾಲೆಗೆ ತೆರಳಲು ಸಾಧ್ಯವಾಗದ ಮಕ್ಕಳಿಗೆ ಸಮಗ್ರ ಶಿಕ್ಷಾ ಕೇರಳ ಕಾಸರಗೋಡು ಸ್ಟಾರ್ಸ್ ಯೋಜನೆಯಲ್ಲಿ ಸೇರಿಸಿ ಕುಂಬಳೆ ಬಿಆರ್‌ಸಿ ವ್ಯಾಪ್ತಿಯ ಎರಡು ವಿದ್ಯಾರ್ಥಿಗಳಿಗೆ ೨೫ ಲಕ್ಷ ರೂ. ವೆಚ್ಚದಲ್ಲಿ ತರಗತಿ ಕೊಠಡಿ ಉಪಕರಣಗಳನ್ನು ವಿತರಿಸಲಾ ಯಿತು. ತರಗತಿ ಚಟುವಟಿಕೆಗಳನ್ನು ಮನೆಯಲ್ಲಿ ಕುಳಿತು ಕಾಣುವುದಕ್ಕೂ ಅದರಲ್ಲಿ ಭಾಗವಹಿಸುವುದಕ್ಕೂ ಇನ್ನು ಈ ಮಕ್ಕಳಿಗೆ ಅವಕಾಶ ಲಭಿಸುವುದು. ಟ್ಯಾಬ್, ಸ್ಟಾಂಡ್, ಕ್ಯಾಮರಾ, ಮೆಮರಿಕಾರ್ಡ್ ಎಂಬಿವುಗಳನ್ನು ಭರತ್ ಕುಮಾರ್‌ನ ಮನೆಗೆ ತಲುಪಿ ಕುಂಬಳೆ ಎಇಒ ಎಂ. ಶಶಿಧರ ನೀಡಿದರು. ಕುಂಬಳೆ ಬಿಆರ್‌ಸಿ ಬ್ಲೋಕ್ ಪ್ರೊಜೆಕ್ಟ್ ಕೋ-ಆರ್ಡಿನೇಟರ್ ಜೆ. ಜಯರಾಮ್, ಪಿಟಿಎ ಅಧ್ಯಕ್ಷ ವಿಜಯಕುಮಾರ್ ಮಾನ್ಯ, ಮುಖ್ಯೋಪಾಧ್ಯಾಯ ಎಂ.ವಿ. ಸುರೇಂದ್ರನ್, ಸ್ಪೆಷಲ್ ಎಜ್ಯುಕೇಟರ್ ಸಂಧ್ಯಾ, ಅಧ್ಯಾಪಕರಾದ ಉಣ್ಣಿಕೃಷ್ಣನ್ ನಂಬೀಶನ್, ಸರಳಾಕ್ಷಿ, ಚಿತ್ರಕಲಾ ಎಂಬಿವರು ಭಾಗವಹಿಸಿದರು.