ವಾನಂದೆಯಲ್ಲಿ ಕಾಡುಕೋಣ ಪತ್ತೆ : ಸ್ಥಳೀಯರಿಗೆ ಆತಂಕ
ಉಪ್ಪಳ: ಇಲ್ಲಿಗೆ ಸಮೀಪದ ವಾನಂದೆ ಪ್ರದೇಶದಲ್ಲಿ ಕಾಡುಕೋಣ ಪತ್ತೆಯಾಗಿರುವುದು ಸ್ಥಳೀಯರಿಗೆ ಆತಂಕ ಸೃಷ್ಟಿಸಿದೆ. ಮಂಗಲ್ಪಾಡಿ ಪಂಚಾಯತ್‌ನ 14ನೇ ವಾರ್ಡ್ ವಾನಂದೆ ಎಂಬಲ್ಲಿ ರಸ್ತೆಯ ಮಧ್ಯೆ ಶನಿವಾರ ಕಾಡುಕೋಣ ಪತ್ತೆಯಾಗಿದೆ. ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನಿಗೆ ರಸ್ತೆ ಮಧ್ಯದಲ್ಲಿ ನಿಂತ ಕಾಡುಕೋಣ ಕಂಡುಬಂದಿದ್ದು, ಸ್ಥಳೀಯರೆಲ್ಲರೂ ಸೇರಿ ಬೊಬ್ಬೆ ಹೊಡೆದಾಗ ಪರಿಸರದ ಹಿತ್ತಿಲಿಗೆ ಪ್ರವೇಶಿಸಿ ಕಣ್ಮರೆಯಾಗಿದೆ. ಶಾಲಾ ಮಕ್ಕಳ ಸಹಿತ ದಿನನಿತ್ಯ ನೂರಾರು ಮಂದಿ ಸಂಚರಿಸುವ ಈ ರಸ್ತೆಯಲ್ಲಿ ಕಾಡುಕೋಣ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.