ವಾಸ್ತುಶಿಲ್ಪಿ ತುಕಾರಾಮ ಆಚಾರ್ಯ ನಿಧನ
ಕಾಸರಗೋಡು: ಪ್ರಸಿದ್ಧ ವಾಸ್ತುಶಿಲ್ಪಿ ತುಕಾರಾಮ ಆಚಾರ್ಯ ಮಾಯಿಪ್ಪಾಡಿ (86) ನಿನ್ನೆ ನಿಧನ ಹೊಂದಿದರು. ಆನೆಗುಂದಿ ಕುಲಗುರು ಪೀಠದ ಶಿಷ್ಯರಾಗಿದ್ದ ಇವರು ಆನೆಗುಂದಿ ಮಹಾ ಸಂಸ್ಥಾನದ ಪುನರುತ್ಥಾನಕ್ಕೆ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮಧೂರು ಶ್ರೀ ಕಾಳಿಕಾಂಬಾ ಮಠ ಸೇರಿದಂತೆ ನೂರಾರು ದೇವಸ್ಥಾನ, ಭಜನಾ ಮಂದಿರ, ದೈವಸ್ಥಾನಗಳ ವಾಸ್ತುಶಿಲ್ಪಿಯಾಗಿ ಖ್ಯಾತಿ ಹೊಂದಿದ್ದರು. ಮಧೂರು ಶ್ರೀ ಕಾಳಿಕಾಂಬಾ ಮಠದ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ ಬ್ರಹ್ಮಕಲಶ ಸಮಿತಿಯಲ್ಲಿ ಅಧ್ಯಕ್ಷರಾಗಿಯೂ, ಬೆಳಗುತ್ತಿ ಮಠದ ಪುನರ್ ನಿರ್ಮಾಣ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಮಹಾ ಸಂಸ್ಥಾನದಿಂದ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.
ಮೃತರು ಪತ್ನಿ ಸರೋಜಿನಿ, ಮಕ್ಕಳಾದ ಲೋಕೇಶ್ ಆಚಾರ್ಯ, ಹರೀಶ್ ಆಚಾರ್ಯ, ಉದಯ ಕುಮಾರ್, ಭುವನೇಶ್ವರಿ, ಅಳಿಯ ರವಿ ಮಾಯಿಪ್ಪಾಡಿ, ಸೊಸೆಯಂದಿರಾದ ಸುಮತಿ, ಶೋಭಿತ, ಇಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಎಂ. ತುಕಾರಾಮ ಆಚಾರ್ಯರ ನಿಧನಕ್ಕೆ ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನ, ಸಹ ಟ್ರಸ್ಟ್‌ಗಳಾದ ಅಸೆಟ್. ಗೋಪರ್ಯಾವರಣ್ ಸಂರಕ್ಷಣಾ ಟ್ರಸ್ಟ್, ಸಮಿತಿಗಳಾದ ಆನೆಗುಂದಿ ಗುರು ಸೇವಾ ಪರಿಷತ್, ಸರಸ್ವತೀ ಮಾತೃಮಂಡಳಿ ಸಂತಾಪ ಸೂಚಿಸಿದೆ.