ವಾಹನಗಳು ಢಿಕ್ಕಿ ಹೊಡೆದು ಆಯಿಲ್ ಸೋರಿಕೆ : ರಸ್ತೆಯಲ್ಲಿ ಅಪಘಾತಕ್ಕೀಡಾದ ಹಲವು ವಾಹನಗಳು
ಕಾಸರಗೋಡು: ವಾಹನಗಳೆರಡು ಪರಸ್ಪರ ಢಿಕ್ಕಿ ಹೊಡೆದು ಆಯಿಲ್ ಸೋರಿಕೆ ಉಂಟಾದ ಪರಿಣಾಮ ಅದು ರಸ್ತೆಯಿಡೀ ಆವರಿಸಿದ ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ವಾಹನಗಳು ಮಗುಚಿ ಬಿದ್ದು ಹಲವರು ಗಾಯಗೊಂಡ ಘಟನೆ ಪೊಯಿನಾಚಿ ಸೌತ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ವಾಗ್ನರ್ ವಾಹನ ಮತ್ತು ಮಾರುತಿ ಸ್ವಿಫ್ಟ್ ಕಾರು ಪರಸ್ಪರ ಢಿಕ್ಕಿ ಹೊಡೆದಿದೆ. ಈ ವೇಳೆ ವಾಗ್ನರ್ ವಾಗನದ ಟ್ಯಾಂಕ್‌ನಿಂದ ಆಯಿಲ್ ಸೋರಿಕೆ ಉಂಟಾಗಿ ರಸ್ತೆಯಿಡೀ ಆವರಿಸಿಕೊಂಡಿತು. ಆ ವೇಳೆ ಆ ದಾರಿಯಾಗಿ ಬರುತ್ತಿದ್ದ ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ವಾಹನಗಳು ಸ್ಕಿಡ್ ಆಗಿ ಮಗುಚಿ ಬಿದ್ದಿವೆ. ಇದರಿಂದ ಹಲವರು ಗಾಯಗೊಂಡಿದ್ದಾರೆ. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ರಸ್ತೆಗೆ ನೀರು ಹಾಯಿಸಿ ಶುಚೀಕರಿಸಿದ್ದಾರೆ. ಆ ಮೂಲಕ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.