ವಾಹನದಲ್ಲಿ ಸಾಗಿಸುತ್ತಿದ್ದ 8.100 ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ
ಕುಂಬಳೆ: ಟ್ಯಾಕ್ಸಿ ವಾಹನದಲ್ಲಿ ಸಾಗಿಸುತ್ತಿದ್ದ 8.100 ಲೀಟರ್ ಕರ್ನಾಟಕ ಮದ್ಯವನ್ನು ಕುಂಬಳೆ ರೇಂಜ್ ಅಬಕಾರಿ ಅಧಿಕಾರಿಗಳು ವಶ ಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಬಾಡೂರು ಬಳಿಯ ನೈಮೊಗರು ನಿವಾಸಿ ಸೀತಾರಾಮ ರೈ ಎನ್ (38) ಎಂಬಾತ ಬಂಧಿತ ವ್ಯಕ್ತಿ. ಬಾಡೂರಿನಲ್ಲಿ ಅಬಕಾರಿ ಅಧಿಕಾರಿಗಳು ಕಾರ್ಯಾZ ರಣೆ ನಡೆಸುತ್ತಿದ್ದಾಗ ಆಗಮಿಸಿದ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಮದ್ಯ ಪತ್ತೆಯಾಗಿದೆ. ಕುಂಬಳೆ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಟಿ.ಎಂ. ಮೊಯ್ದೀನ್ ಸಾದಿಕ್, ಪ್ರಿವೆಂಟೀವ್ ಆಫೀಸರ್ ಗ್ರೇಡ್ ರಮೇಶನ್ ಆರ್, ಸಿಇಒಗಳಾದ ಪ್ರಸನ್ನ ಕುಮಾರ್ ವಿ, ಅಖಿಲೇಶ್ ಎಂ.ಎಂ, ಚಾಲಕ ಪ್ರವೀಣ್ ಕುಮಾರ್ ಪಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.