ವಾಹನ ಅಪಘಾತದಲ್ಲಿ ಟೈಲರಿಂಗ್ ಅಂಗಡಿ ಮಾಲಕ ಮೃತ್ಯು: ನಾಡಿನಲ್ಲಿ ಶೋಕಸಾಗರ
ಕುಂಬಳೆ: ಕಾರು ಹಾಗೂ ಬೈಕ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಟೈಲರಿಂಗ್ ಅಂಗಡಿ ಮಾಲಕ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ಮುಳಿಯಡ್ಕ ದರ್ಬಾರ್ಕಟ್ಟೆ ನಿವಾಸಿ ವಸಂತ (55) ಎಂಬವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಇವರು ಸೂರಂಬೈಲಿ ನಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿ ದ್ದರು. ಮೊನ್ನೆ ರಾತ್ರಿ 8 ಗಂಟೆ ವೇಳೆ ಇವರು ಸಂಚರಿಸುತ್ತಿದ್ದ ಬೈಕ್ಗೆ ಕಾರು ಢಿಕ್ಕಿ ಹೊಡೆದಿತ್ತು. ಕುಂಬಳೆ-ಮುಳ್ಳೇರಿಯ ಕೆಎಸ್ಟಿಪಿ ರಸ್ತೆಯಲ್ಲಿ ಸೀತಾಂಗೋಳಿಯ ಅಪ್ಸರ ಮಿಲ್ ಸಮೀಪ್ಲ ಅಪಘಾತ ವುಂಟಾಗಿದೆ. ಇದರಿಂದ ಗಂಭೀರ ಗಾಯಗೊಂಡ ವಸಂತರನ್ನು ಕೂಡ ಲೇ ನಾಗರಿಕರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ಪತ್ನಿ ಶಶಿಕಲ, ಪುತ್ರಿ ಧನ್ಯಶ್ರೀ ಸಹೋದರ-ಸಹೋದರಿ ಯರಾದ ರವಿ, ಶಶಿ ಕುಮಾರ್, ಶಶಿ, ವಿದ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.