ವಾಹನ ಕಳವು: ಕಾಸರಗೋಡು ನಿವಾಸಿ ಸೇರಿ ಇಬ್ಬರ ಸೆರೆ
ಕಾಸರಗೋಡು: ಕಣ್ಣೂರು ರೈಲ್ವೇ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರ ಗೋಡು ನಿವಾಸಿ ಸೇರಿ ಇಬ್ಬರನ್ನು ಕಣ್ಣೂರು ಟೌನ್ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಚೀಮೇನಿ ಕಯ್ಯೂರು ಮಾಂಙಾಟ್ಟಿಡತ್ತ್ ಹೌಸ್‌ನ ಎಂ. ಅಖಿಲ್ (34) ಮತ್ತು ಅಳಿಕ್ಕಲ್ ಚಾಲಿಲ್ ಕಾಲನಿ ಪರಂಬಿಲ್‌ನ ಪಿ.ವಿ. ಅನಸ್ (24) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಈ ತಿಂಗಳ 9ರಂದು ಇವರು ದ್ವಿಚಕ್ರ ವಾಹನ ಕಳವು ನಡೆಸಿದ್ದರು. ಬಂಧಿತ ಆರೋಪಿಗಳು ಇತರ ಹಲವು ವಾಹನ ಕಳವು ಪ್ರಕರಣಗಳ ಆರೋಪಿಗಳಾಗಿದ್ದರು. ಅದಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ಅನುಭವಿಸಿದವರೂ ಆಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.