ವಿದ್ಯಾನಗರ ರೇಶನ್ ಅಂಗಡಿ ಮಾಲಕ ನಿಧನ
ವಿದ್ಯಾನಗರ: ವಿದ್ಯಾನಗರದ ರೇಶನ್ ಅಂಗಡಿ ಮಾಲಕ, ಮೂಲತಃ ಕೋಟೂರು ನಿವಾಸಿ ಪ್ರಸ್ತುತ ನೆಲ್ಕಳ ದೇವಿಕೃಪಾದಲ್ಲಿ ವಾಸಿಸುವ ಟಿ. ಕುಂಞಿಕಣ್ಣನ್ (58) ನಿಧನ ಹೊಂ ದಿದರು. ಕೋಟೂರು ಚೋಯಿಚ್ಚಿ- ದಿ| ತುರುಂಬನ್ ದಂಪತಿ ಪುತ್ರನಾದ ಮೃತರು ಪತ್ನಿ ಮಾಲಿನಿ, ಮಕ್ಕಳಾದ ಲಿನ್‌ಶ, ಲಿನೇಶ್, ಅಳಿಯ ವಿನೀತ್, ಸಹೋದರಿಯರಾದ ಗೌರಿ, ದಾಕ್ಷಾಯಿಣಿ, ಲೀಲಾ, ಬಿಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರ ಅಶೋಕನ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ಕೋಟೂರಿನ ಮನೆ ಬಳಿ ನಡೆಯಲಿದೆ.