ವಿದ್ಯಾರ್ಥಿಗಳ ಮಧ್ಯೆ ಪೂರ್ವ ದ್ವೇಷ: 10ನೇ ತರಗತಿ ವಿದ್ಯಾರ್ಥಿಯನ್ನು ಸಹಪಾಠಿ, ಗೆಳೆಯರು ಅಪಹರಿಸಿ ಹಲ್ಲೆ

ಮಲಪ್ಪುರಂ: 10ನೇ ತರಗತಿ ವಿದ್ಯಾರ್ಥಿಯನ್ನು ಸಹಪಾಠಿ ಹಾಗೂ ಗೆಳೆಯ ಸೇರಿ ಕ್ರೂರವಾಗಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಮೂರ್ಕನಾಡ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾದ ಮುಬಿನ್  ಗಾಯ ಗೊಂಡವನು. ಆರು ತಿಂಗಳ ಹಿಂದೆ ಮುಬಿನ್ ಹಾಗೂ ಸಹಪಾಠಿ ಮಧ್ಯೆ ವಿವಾದ ಉಂಟಾಗಿತ್ತು. ಆ ವೇಳೆ ಅಧ್ಯಾಪಕರ ಮಧ್ಯಸ್ಥಿಕೆಯಲ್ಲಿ ಅದನ್ನು ಪರಿಹರಿಸಲಾಗಿತ್ತು. ನಿನ್ನೆ ಸ್ಪೋರ್ಟ್ಸ್ ಕ್ಯಾಂಪ್ ಕಳೆದು ಮನೆಗೆ ಹಿಂತಿರುಗುತ್ತಿದ್ದ ಮುಬಿನ್‌ನನ್ನು ಸಹಪಾಠಿ ಹಾಗೂ ಆತನ ಗೆಳೆಯ ಸೇರಿದ ಆರು ಮಂದಿಯ ತಂಡ ಅಪಹರಿಸಿಕೊಂಡು ಹೋಗಿ ಕಲ್ಲಿನಿಂದ ತಲೆಗೆ ಗುದ್ದಿ ಹಲ್ಲೆ ನಡೆಸಿದ್ದಾರೆನ್ನ ಲಾಗಿದೆ. ಇದರಲ್ಲಿ  ಓರ್ವ ಮುಬಿನ್‌ನ ಕಣ್ಣಿಗೂ ಗುದ್ದಿರುವು ದಾಗಿ ಗೆಳೆಯನೊಂದಿಗೆ ಹೇಳುತ್ತಿ ರುವ ಶಬ್ದ ಸಂದೇಶ ಪೊಲೀಸರಿಗೆ ಲಭಿಸಿದೆ. ಗಾಯ ಗೊಂಡ ಮುಬಿನ್ ನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಮುಬಿನ್‌ನ ಕುಟುಂಬ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

RELATED NEWS

You cannot copy contents of this page