ವಿದ್ಯಾರ್ಥಿನಿಯರ ಮುಂದೆ ನಗ್ನತೆ ಪ್ರದರ್ಶನ: ವೃದ್ದ ಸೆರೆ

ಕುಂಬಳೆ: ಶಾಲಾ ವಿದ್ಯಾರ್ಥಿನಿ ಯರ ಮುಂದೆ ವೃದ್ಧನೋರ್ವ ನಗ್ನತೆ ಪ್ರದರ್ಶಿಸಿ ಪೊಲೀಸರ ಸೆರೆಗೀಡಾದ ಘಟನೆ ನಡೆದಿದೆ.

ಕಳತ್ತೂರು ಇಚ್ಲಂಪಾಡಿ ನೆಲ್ಯಡ್ಕದ ಅಬೂಬಕರ್ ಎ.ಬಿ. (೬೬) ಎಂಬಾತ ಸೆರೆಗೀಡಾದ ಆರೋಪಿ. ಈತ ನಿನ್ನೆ ಮಧ್ಯಾಹ್ನ ಕುಂಬಳೆ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಕೊಯಿಪ್ಪಾಡಿ ಗ್ರಾಮ ಕಚೇರಿ ಸಮೀಪ ನಿಂತುಕೊಂಡು, ಶಾಲಾ ವಿದ್ಯಾರ್ಥಿನಿಯರು ಬರುತ್ತಿದ್ದಾಗ ಅವರ ಮುಂದೆ ನಗ್ನತೆ ಪ್ರದರ್ಶಿಸಿದ್ದಾನೆನ್ನಲಾಗಿದೆ. ವರ್ತನೆಯನ್ನು ಕಂಡು ಭಯಗೊಂಡ ಮಕ್ಕಳು ಅಲ್ಲಿಂದ ಓಡಿದ್ದಾರೆ. ಇದನ್ನರಿತ ಪೊಲೀಸರು ಸ್ಥಳಕ್ಕೆ ತಲುಪಿದಾಗ ಆರೋಪಿ ತನ್ನ ಕೆಟ್ಟ ವರ್ತನೆಯನ್ನು ಪುನರಾವರ್ತಿಸಿದ್ದಾನೆನ್ನಲಾಗಿದೆ. ಇದರಿಂದ ಪೊಲೀಸರು ಅಬೂಬಕರ್ ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಘಟನೆ ಬಗ್ಗೆ ಇನ್ಸ್‌ಪೆಕ್ಟರ್ ಇ. ಅನೂಪ್ ನೀಡಿದ ದೂರಿನಂತೆ ಪೊಲೀಸರು  ಕೇಸು ದಾಖಲಿಸಿ ಅಬೂಬಕರ್‌ನನ್ನು ಬಂಧಿಸಿದ್ದಾರೆ.

You cannot copy contents of this page