ವಿದ್ಯಾಲಯಗಳನ್ನು ಗೂಂಡಾ ಕೇಂದ್ರವನ್ನಾಗಿ ಮಾಡಿದ ಎಸ್‌ಎಫ್‌ಐ- ಡಿಎಂಕೆ ಮೊಹಮ್ಮದ್ ಆರೋಪ

ಮಂಜೇಶ್ವರ: ಪೂಕೋಡ್ ವೆಟರ್ನರಿ ಕಾಲೇಜಿನ ವಿದ್ಯಾರ್ಥಿ ಸಿದ್ಧಾರ್ಥ್ನ ಕೊಲೆಯನ್ನು ಖಂಡಿಸಿ ರಾಜ್ಯದಾದ್ಯಂತ ಕಾಂಗ್ರೆಸ್ ನಡೆಸುವ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಂಜಿನ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯನ್ನು ಉಪ್ಪಳದಲ್ಲಿ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ ಎಂ ಕೆ ಮೊಹ ಮ್ಮದ್ ಉದ್ಘಾಟಿಸಿ ಮಾತನಾಡಿದರು. ಸಹಪಾಠಿಯನ್ನು ಅನ್ನ, ನೀರು ನೀಡದೆ ನಿರಂತರ ಚಿತ್ರಹಿಂಸೆ ನೀಡಿ ನೇತು ಹಾಕಿ ಕೊಂದ ಎಡರಂಗ ವಿದ್ಯಾರ್ಥಿ ಸಂಘಟನೆಯಾದ ಎಸ್ ಎಫ್ ಐ ಯು ಈ ದೇಶಕ್ಕೆ ಶಾಪವಾಗಿದೆ ಎಂದು ಆರೋಪಿಸಿದರು. ಪಿಣರಾಯಿ ಸರಕಾರ ಕೊಲೆಯನ್ನು ಸಮರ್ಥಿಸುತ್ತಾ ಬಂದಿದ್ದು ಕೊಲೆಗಡುಕರನ್ನು ಸಂರಕ್ಷಿ ಸುವ ಕೆಲಸವನ್ನು ಮಾಡುತ್ತಿದ್ದು, ಈ ರೀತಿಯ ಸಂಘಟನೆಗಳನ್ನು ನಿಷೇ ದಿಸಿದರೆ ಮಾತ್ರ ಕಾಲೇಜು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳು ನೆಮ್ಮದಿ ಯಿಂದ ಕಲಿಯಲು ಸಾಧ್ಯವಾಗ ಬಹುದು ಎಂದರು. ಬಾಬು ಬಂ ದ್ಯೋಡು ಅಧ್ಯಕ್ಷತೆ ವಹಿಸಿದ್ದರು. ನೇತಾ ರರಾದ ಇಕ್ಬಾಲ್ ಕಳಿಯೂರ್, ಮೊಹಮ್ಮದ್ ಮಜಾಲ್, ಪಿ ಎಂ ಖಾದರ್ ಹಾಜಿ,ಪ್ರದೀಪ್ ಶೆಟ್ಟಿ, ಹಮೀದ್ ಕಣಿಯೂರು, ಬರ್ನಾರ್ಡ್ ಡಿ ಅಲ್ಮೇ ಡಾ ,ಅಝೀಝ್ ಕಲ್ಲೂರ್,ಇಬ್ರಾಹಿಂ ಇಚ್ಲಂಗೋಡ್, ಮೊಹಮ್ಮದ್ ದೀನಾರ್ ನಗರ, ಹನೀಫ್ ಪೆರಿಂಗಡಿ, ಇಸ್ಮಾ ಯಿಲ್ ಸೋಂಕಾಲ್,ಬಾಬು ಇಚ್ಲಂ ಗೋಡ್, ಇಬ್ರಾಹಿಂ ಕೋಟಾ, ಯೂಸುಫ್ ಮಾಸ್ಟರ್, ಹಾರಿಸ್ ಪಿ ಕೆ, ಮನ್ಸೂರ್ ಕಂಡತ್ತಿಲ್ ಭಾಗವಹಿಸಿದರು. ಹನೀಫ್ ಪಡಿಞÁರ್ ಸ್ವಾಗತಿಸಿ, ಮೊಹಮ್ಮದ್ ಸೀಗಂದಡಿ ವಂದಿಸಿದರು.

RELATED NEWS

You cannot copy contents of this page