ವಿಮಾನದಲ್ಲಿ ಸಿಗರೇಟ್ ಸೇದಿದ ಮಂಜೇಶ್ವರ ನಿವಾಸಿ ವಿರುದ್ಧ ಕೇಸು
ಮಂಗಳೂರು: ಭದ್ರತಾ ನಿರ್ದೇ ಶಗಳನ್ನು ಉಲ್ಲಂ ಘಿಸಿ ವಿಮಾನ ದಲ್ಲಿ ಸಿಗರೇಟ್ ಸೇದಿದ ಮಂಜೇ ಶ್ವರ ನಿವಾಸಿ ಮುಶಾದಿಕ್ ಹುಸೈನ್ (24)ನ ವಿರುದ್ಧ ಬಜ್ಪೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 31ರಂದು ಸಂಜೆ ಅಬುದಾಬಿಯಿಂದ ತಲುಪಿದ ಇಂಡಿಗೋ ವಿಮಾನದಲ್ಲಿ ಈ ಯುವಕ ಆಗಮಿಸಿದ್ದನು. ವಿಮಾನ ಇಳಿಯುವುದರ ಅಲ್ಪ ಮುಂಚೆ ಯುವಕ ವಿಮಾನದ ಬಾತ್ ರೂಂನಲ್ಲಿ ಸಿಗರೇಟ್ ಸೇದಿರುವುದಾಗಿ ದೂರಲಾಗಿದೆ. ವಿಮಾನ ಅಧಿಕಾರಿಗಳು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.