ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ಯಾಲೆಸ್ತಿನ್ ಪರ ಪ್ರಚಾರದಿಂದ ತರೂರ್ ಔಟ್

ತಿರುವನಂತಪುರ: ಮುಸ್ಲಿಂ ಲೀಗ್ ಆಶ್ರಯದಲ್ಲಿ ಕಲ್ಲಿಕೋಟೆ ಯಲ್ಲಿ ಮೊನ್ನೆ ನಡೆದ ಪ್ಯಾಲೆಸ್ತಿನ್ ಪರ ರ‍್ಯಾಲಿಯಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡು ತ್ತಿದ್ದ ವೇಳೆ ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ನಡೆದಿದ್ದು ಭಯೋತ್ಪಾದಕ ದಾಳಿಯಾಗಿದೆ ಎಂದು  ಕಾಂಗ್ರೆಸ್ ನೇತಾರ ಶಶಿ ತರೂರ್ ನೀಡಿದ ಹೇಳಿಕೆ ಭಾರೀ ವಿವಾದ ಹಾಗೂ ಅದರ ವಿರುದ್ಧ  ಭಾರೀ ಆಕ್ರೋಶಕ್ಕೂ ಉಂಟಾದ  ಹಿನ್ನೆಲೆಯಲ್ಲಿ  ಪ್ಯಾಲೆಸ್ತಿನ್ ಪರ ಕಾರ್ಯಕ್ರಮದಿಂದ ತರೂರ್‌ರನ್ನು ಔಟ್ ಮಾಡಲಾಗಿದೆ.

ಮುಸ್ಲಿಂ ಸಂಘಟನ ಮಹಲ್ ಎಂಪವರ್‌ಮೆಂಟ್ ಮಿಷನ್ (ಎಂಇಎಂ)ನ ನೇತೃತ್ವದಲ್ಲಿ ಅಕ್ಟೋಬರ್ ೩೦ರಂದು ತಿರುವನಂತಪುರದಲ್ಲಿ ಪ್ಯಾಲಸ್ತಿನ್ ಪರ ರ‍್ಯಾಲಿ ಆಯೋಜಿಸಲಾಗಿದೆ.  ಅದರಲ್ಲಿ ಭಾಗವಹಿಸಲು ಅಲ್ಲಿನ ಸಂಸದ ಎಂಬ ನೆಲೆಯಲ್ಲಿ ಶಶಿ ತರೂರ್‌ಗೆ ಆಹ್ವಾನ ನೀಡಲಾಗಿತ್ತು. ಆದ್ದರಿಂದ ಈಗ ತರೂರ್‌ರನ್ನು ಹೊರತುಪಡಿಸಲಾಗಿದೆ.

You cannot copy contents of this page