ಕಾಸರಗೋಡು: ಕಾಸರಗೋಡು ರೋಟರಿ ಕ್ಲಬ್, ಜಿಲ್ಲಾ ಪೊಲೀಸ್ ಆಫೀಸ್, ಐ.ಎಂ.ಎ, ಐ.ಎ.ಪಿ ಎಂಬಿವುಗಳ ಸಹಕಾರದೊಂದಿಗೆ ನಡೆದ ಪೊಲೀಸ್ ಅಧಿಕಾರಿಗಳಿ ಗಿರುವ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಚೀಫ್ ಪಿ.ಬಿ. ಜೋಯ್ ಉದ್ಘಾಟಿಸಿದರು. ಕಾಸರ ಗೋಡು ಎ.ಆರ್.ಕ್ಯಾಂಪ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಮರ್ಜೆನ್ಸಿ ಲೈಫ್ ಸಪೋರ್ಟ್, ಬಿ.ಎಲ್.ಎಸ್, ಸಿ.ಪಿ.ಆರ್, ಫಸ್ಟ್ ಎಯ್ಡ್ ಎಂಬಿವು ಗಳಲ್ಲಿ ತರಬೇತಿ ನೀಡಲಾಯಿತು. ರೊಟೇರಿಯನ್ ಡಾ| ಬಿ. ನಾರಾ ಯಣ ನಾಯ್ಕ್, ಜಿಲ್ಲಾ ಟ್ರೈನರ್ ಆಫ್ ಎಮರ್ಜೆನ್ಸಿ ಲೈಫ್ ಸಪೋ ರ್ಟ್, ಡಾ| ಅನೂಪ್ ನಾಯರ್ ತರಬೇತಿ ನೀಡಿದರು. ಎಸ್ಐ ಸದಾ ಶಿವನ್ ಎಂ ಸ್ವಾಗತಿಸಿದರು. ರಿಸರ್ವ್ ಇನ್ಸ್ಪೆಕ್ಟರ್ ಮಧುಸೂದನನ್ ಪಿ.ವಿ, ರೊಟೇರಿಯನ್ ಹರಿಪ್ರಸಾದ್ ಕೆ, ರೊಟೇರಿಯನ್ ವಿಶ್ವಜಿತ್ ಶುಭ ಕೋರಿದರು. ವಿವಿಧ ವಿಷಯಗಳಲ್ಲಿ 75 ಪೊಲೀಸರಿಗೆ ತರಬೇತಿ ನೀಡಲಾಯಿತು. ಎ.ಎಸ್.ಐ ಸುರೇಶ್ ವಂದಿಸಿದರು.
