ವಿಶ್ವಹಿಂದೂ ಪರಿಷತ್ ಬಜರಂಗ ದಳ ಅಡೂರು ಘಟಕದಿಂದ ರಕ್ತದಾನ ಶಿಬಿರ

ಅಡೂರು: ವಿಶ್ವಹಿಂದೂ ಪರಿಷತ್ ಬಜರಂಗದಳ ಅಡೂರು ಘಟಕ ಇದರ ವತಿಯಿಂದ ಸೇವಾಭಾರತಿ ಕಾಸರಗೋಡು ಹಾಗೂ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಅಡೂರು ವಿದ್ಯಾ ಭಾರತಿ ವಿದ್ಯಾಲಯದಲ್ಲಿ ನಡೆಯಿತು. ವಿಶ್ವಹಿಂದೂ ಪರಿಷತ್ ಅಡೂರು ಖಂಡ ಸಮಿತಿ ಕಾರ್ಯದರ್ಶಿ ಅವಿನಾಶ್ ಉದ್ಘಾಟಿಸಿದರು. ಮುಖಂಡರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಹರೀಶ್ ಶೆಟ್ಟಿ ಬದಿಯಡ್ಕ, ಸುನಿಲ್ ಶೆಟ್ಟಿ ಬದಿಯಡ್ಕ ಹಾಗೂ ಹಲವರು ಉಪಸ್ಥಿತರಿದ್ದರು.

You cannot copy contents of this page