ವಿಶ್ವ ಛಾಯಾಗ್ರಹಣ ದಿನ: ಹಿರಿಯ ಛಾಯಾಗ್ರಾಹಕನಿಗೆ ಗೌರವ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್  ಇದರ ವತಿಯಿಂದ ವಿಶ್ವ ಛಾಯಾಗ್ರಹಣ ದಿನವಾದ ನಿನ್ನೆ ಕಳೆದ 5 ದಶಕಗಳಿಂದ ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಚಂದ್ರಗಿರಿ ಬಳಿಯ ಕುನ್ನುಮಲ್ ನಿವಾಸಿ ನಾರಾಯಣನ್ (ರಾಮನ್ಸ್ ಸ್ಟುಡಿಯೋ)ರನ್ನು ಎಕೆಪಿಎ ವತಿಯಿಂದ ಗೌರವಿಸಲಾಯಿತು. ಕಾಸರಗೋಡು ವಲಯ ಅಧ್ಯಕ್ಷ ವಾಸು ಎ. ಶಾಲು ಹೊದಿಸಿ ಯೂನಿಟ್ ಅಧ್ಯಕ್ಷ ಮೈಂದಪ್ಪ ಕೆ.ಎಂ. ಸ್ಮರಣಿಕೆ ನೀಡಿ ಗೌರವಿಸಿದರು. ಗೌರವ ಸ್ವೀಕರಿಸಿದ ಅವರು ತಮ್ಮ 50 ವರ್ಷಗಳ ವೃತ್ತಿ ಜೀವನದ ನೆನಪು ಮೆಲುಕು ಹಾಕಿದರು. ಈ ಸಂದರ್ಭದಲ್ಲಿ ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್, ವಲಯ ಪಿ.ಆರ್‌ಒ ಚಂದ್ರಶೇಖರ ಎಂ, ಯೂನಿಟ್ ನಿರೀಕ್ಷಕ ಪ್ರಮೋದ್, ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ, ಉಪಾಧ್ಯಕ್ಷ ಹಾಗೂ ಸಾಂತ್ವನ ಕೋರ್ಡಿನೇಟರ್ ಗಣೇಶ್ ರೈ, ಪಿಆರ್‌ಒ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

RELATED NEWS

You cannot copy contents of this page