ವಿಹಿಂಪ ಸೇವಾ ವಿಭಾಗದ ನೇತೃತ್ವದಲ್ಲಿ ತಿಳುವಳಿಕಾ ಜಾಗೃತಿ ಶಿಬಿರ
ಕಾಸರಗೋಡು: ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲೆಯ ಸೇವಾ ವಿಭಾಗದ ನೇತೃತ್ವದಲ್ಲಿ ವಕ್ಫ್‌ಬೋರ್ಡ್ ಬಗೆಗಿನ ವಿಶೇಷ ತಿಳುವಳಿಕಾ ಜಾಗೃತಿ ಶಿಬಿರ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಿತು. ವಿಹಿಂಪ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದು, ಸಹಕಾರ ಭಾರತಿ ಕೇರಳ ರಾಜ್ಯಾಧ್ಯಕ್ಷ ಕರುಣಾಕರ ನಂಬಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲತೇಶ್ ಬಾಕ್ರಬೈಲ್ ವಕ್ಫ್ ಬೋರ್ಡ್ ಬಗ್ಗೆ ಮಾಹಿತಿ ನೀಡಿದರು. ಯಾದವ ಕೀರ್ತೇಶ್ವರ ಸ್ವಾಗತಿಸಿ, ಪದ್ಮಾ ಮೋಹನ್‌ದಾಸ್ ವಂದಿಸಿದರು. ಕೊಂಡೆವೂರು ಶ್ರೀಗಳು ಉಪಸ್ಥಿತರಿದ್ದರು. ರಘು ಭಟ್ ಬಂದ್ಯೋಡು ನಿರೂಪಿಸಿದರು.