ವೀಣಾವಾದಿನಿಯಲ್ಲಿ ವೇದ ನಾದ ಯೋಗ ತರಂಗಿಣಿ ನಾಳೆಯಿಂದ
ಬದಿಯಡ್ಕ: ಬಳ್ಳಪದವು ನಾರಾ ಯಣೀಯಂ ವೀಣಾವಾದಿನಿಯಲ್ಲಿ ನಾಳೆಯಿಂದ 8ರ ತನಕ ವೇದ ನಾದ ಯೋಗ ತರಂಗಿಣಿ ಕಾರ್ಯಕ್ರಮ ಹಾಗೂ ಸಂಗೀತ ಸಾಂಸ್ಕೃತಿಕ ಭವನ ಬಾಲರಾಮವರಮ್ ಇದರ ಉದ್ಘಾ ಟನೆ ವಿವಿಧ ಕಾರ್ಯಕ್ರಮಗಳೊದಿಗೆ ನಡೆಯಲಿದೆ.
ನಾಳೆ ಬೆಳಗ್ಗೆ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣ ನಂಬೂದಿರಿ ಇವರ ನೇತೃತ್ವದಲ್ಲಿ ಗಣಪತಿ ಹವನ, ಲಕ್ಷಾರ್ಚನೆ ನಡೆಯ ಲಿದೆ. ಬಳಿಕ ಸಾಂಸ್ಕೃತಿಕ ಮೆರವಣಿಗೆ ನಡೆಯುವುದು. ಬಳಿಕ ಕವಿಗೋಷ್ಠಿ ನಡೆಯಲಿದ್ದು, ರಾಜಶ್ರೀ ರೈ ಟಿ. ಪೆರ್ಲ ಅಧ್ಯಕ್ಷತೆ ವಹಿಸುವರು. ಕಾಸರ ಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಉದ್ಘಾಟಿಸುವರು. ಸಂಗೀತ ವಿದ್ವಾನ್ ಯೋಗೀಶ್ ಶರ್ಮಾ ಬಳ್ಳಪದವ್ ಮತ್ತಿರರು ಉಪಸ್ಥಿತರಿರುವರು.
ಅಪರಾಹ್ನ ನಡೆಯುವ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನ ಪರಿಷತ್ತು ಅಧ್ಯಕ್ಷ ಬಸವರಾಜ್ ಎಸ್. ಹೊರಟ್ಟಿ ದೀಪ ಬೆಳಗಿಸಿ ಉದ್ಘಾಟಿಸು ವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಆಶ್ರಫ್, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಮಾನಸ, ಶಾಸಕ ಸಿ.ಎಚ್. ಕುಂಞAಬು, ರವೀಶ ತಂತ್ರಿ ಕುಂಟಾರು, ಶಿವಶಂಕರ ನೆಕ್ರಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕುಂಬ್ಡಾಜೆ ಪಂ. ಅಧ್ಯಕ್ಷ ಹಮೀದಲಿ ಪೊಸಳಿಕೆ, ಆನಂದ ಮವ್ವಾರು, ಮಾಹಿನ್ ಕೇಳೋಟ್, ರವಿನಾಯ್ಕಾಪು, ಪ್ರವೀಣ್ ಕುಮಾರ್, ಚನಿಯಪ್ಪ ನಾಯ್ಕ್, ನಾಗರಾಜ ಉಪ್ಪಂಗಳ ಉಪಸ್ಥಿತರಿರುವರು. ಯೋಗೀಶ್ ಶರ್ಮಾ ಬಳ್ಳಪದವ್, ರಾಜರಾಮ ಪೆರ್ಲ, ಪ್ರಭಾಕರ ಕುಂಜಾರು ಭಾಗವಹಿಸುವರು.
ಬಳಿಕ ಕಾರ್ಯಾಗಾರ, ಗಮಕ, ರಾತ್ರಿ ವಾಸ್ತು ರಾಕ್ಷೋಘ್ನಮ ನಡೆಯಲಿದೆ.6ರಂದು ಬೆಳಗ್ಗೆ ಎಡನೀರು ಮಠಾದೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣ ನಂಬೂದಿರಿ ನೇತೃತ್ವದಲ್ಲಿ ಪ್ರವೇಶ ಮುಹೂರ್ತ ನಡೆಯಲಿದೆ. ಬಳಿಕ ಭಾವಾಂಬಿಕಾ ಸಂಗೀತ ಕಾರ್ಯಕ್ರಮ, ಮಹಾ ಶ್ರೀಚಕ್ರ ನವಾವರಣ ಪೂಜೆ ನಡೆಯಲಿದೆ.
7ರಂದು ನವಗ್ರಹ ಪೂಜೆ, ರಾಶಿಕಪ್ರೀಯ, ಯಕ್ಷಗಾನ ತಾಳಮದ್ದಳೆ, ಮುರಳೀವರಮ್, ಗುರುಪೂಜೆ, ಹಿಂದೂಸ್ತಾನಿ ಸಂಗೀತ, ಭರತನಾಟ್ಯಂ ಕಾರ್ಯಕ್ರಮ ನಡೆಯಲಿದೆ.
8ರಂದು ಬೆಳಗ್ಗೆ ಪಂಚರತ್ನ ಕೃತೀಶ್, ನಾದೋಪಸಾನ, ಅಪರಾಹ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಸಂಜೆ ಕರ್ಣಾಟಕ ಸಂಗೀತ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.