ವೃದ್ಧ ತೋಡಿನಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವೃದ್ಧನೋರ್ವ ತೋಡಿನಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಳ್ಳಾರ್ ಚುಳ್ಳಿಕ್ಕರ ಎರುಮಪ್ಪಳ್ಳ ಎಂಬಲ್ಲಿನ ಕರಿಯಿಲ್‌ವೀಟಿಲ್ ಕೆ.ವಿ. ಜೋಸೆಫ್ (ಪಾಪನ್ ಚೇಟನ್-99) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಮನೆ ಸಮೀಪದ ತೋಡಿನಲ್ಲಿ ಇವರು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಸ್ಥಳೀಯರು ಪುಡಂಕಲ್ಲುವಿನ ತಾಲೂಕು ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ಅವರು ಮೃತಪಟ್ಟಿದ್ದರು. ತೋಟದಲ್ಲಿ ಅಡಿಕೆ ಹೆಕ್ಕಲು ಹೋದಾಗ ಆಯತಪ್ಪಿ ತೋಡಿಗೆ ಬಿದ್ದು ಸಾವು ಸಂಭವಿಸಿರಬಹುದೆಂದು ಸಂಶಯಿ ಲಾಗುತ್ತಿದೆ. ಘಟನೆ ಬಗ್ಗೆ ರಾಜಪುರಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇವರ ಪತ್ನಿ ಮರಿಯ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಡಾ. ಸಿಸ್ಟರ್ ಲಿಸಿ ಜೋಸ್, ರೋಸಮ್ಮ, ಜೋರ್ಜ್, ಕೆ.ಜೆ. ಜೇಮ್ಸ್, ಟೋಮಿ, ಜೋನ್, ಅಳಿಯ, ಸೊಸೆಯಂದಿರು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page