ವೇತನ ವಿಳಂಬ: ಕೆಎಸ್‌ಆರ್‌ಟಿಸಿ ನೌಕರರಿಂದ ೨೬ರಂದು ಮುಷ್ಕರ

ತಿರುವನಂತಪುರ: ಕೆಎಸ್‌ಆರ್‌ಟಿಸಿ ನೌಕರರು ಈ ತಿಂಗಳ ೨೬ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.  ಪ್ರತಿ ತಿಂಗಳ ೫ರ ಮುಂಚಿತ ವೇತನ ವಿತರಿಸುವುದಾಗಿ ಮುಖ್ಯಮಂತ್ರಿ ಭರವಸೆ ಪಾಲಿಸದಿರುವುದನ್ನು ಪ್ರತಿಭಟಿಸಿ ಮುಷ್ಕರ ನಡೆಸುವುದಾಗಿ ತಿಳಿಸಲಾಗಿದೆ. ಐಎನ್‌ಟಿಯುಸಿ, ಸಿಐಟಿಯು ಸಂಘಟ ನೆಗಳು ಒಳಗೊಂಡ ಸಂಯುಕ್ತ ಮುಷ್ಕರ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ.

ಹತ್ತನೇ ತಾರೀಕು ಕಳೆದರೂ ಜುಲೈ ತಿಂಗಳ ವೇತನ ಲಭಿಸಿಲ್ಲ. ಕಳೆದ ವರ್ಷದ ಓಣಂ ಸೌಲಭ್ಯಗಳು ಇನ್ನೂ ಲಭಿಸಿಲ್ಲವೆಂದು ಮುಷ್ಕರ ಸಮಿತಿ  ತಿಳಿಸಿದೆ. ವೇತನ ನಿಗದಿತ ಸಮಯ ದೊಳಗೆ ನೀಡಬೇಕು, ಓಣಂ ಸೌಲಭ್ಯ ಗಳನ್ನು ಮಂಜೂರು ಮಾಡಬೇಕು ಮೊದ ಲಾದ ಬೇಡಿಕೆ ಮುಂದಿರಿಸಿ ಮುಷ್ಕರ ನಡೆಯಲಿದೆ. ಸೂಕ್ತ ನಿರ್ಧಾರ ಕೈಗೊಳ್ಳ ದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿಯೂ ಸಮಿತಿ ತಿಳಿಸಿದೆ.

RELATED NEWS

You cannot copy contents of this page