ವೈದ್ಯೆಯೊಂದಿಗೆ ಅನುಚಿತ ವರ್ತನೆ: ಯುವಕ ಸೆರೆ

ಕುಂಬಳೆ: ವೈದ್ಯೆಯೊಂದಿಗೆ ಲೈಂಗಿಕ ಉದ್ದೇಶದೊಂದಿಗೆ ಅನುಚಿತ ರೀತಿಯಲ್ಲಿ ಮಾತನಾಡಿ, ಕರ್ತವ್ಯ ನಿರ್ವಹಣೆಗೆ  ಅಡ್ಡಿಪಡಿಸಿದ ಆರೋ ಪದಂತೆ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಆರೋಪಿಗಳ ಪೈಕಿ ಓರ್ವನಾದ ಅಂಗಡಿಮೊಗರು ಪೊಯ್ಯಕ್ಕರದ ಫರ್ಸೀನ್ (32) ಎಂಬಾತನನ್ನು  ಬಂಧಿಸಿ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಯಿತು.

ನಿನ್ನೆ ಮುಂಜಾನೆ ಐದು ಗಂಟೆ ವೇಳೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಸ್ಥಿತಿಯಲ್ಲಿ ಯುವಕ ಹಾಗೂ ಇನ್ನೋರ್ವ ಆಸ್ಪತ್ರೆಗೆ ತಲುಪಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಕಲ್ಲಿಕೋಟೆ ನಿವಾಸಿಯಾದ ವೈದ್ಯೆ ಗಾಯಾಳುವಿನ ತಪಾಸಣೆ ನಡೆಸಿದ್ದರು. ಗಾಯ ಹೇಗೆ ಉಂಟಾಯಿತೆಂದು  ಪ್ರಶ್ನಿಸಿದಾಗ ಫರ್ಸೀನ್ ಹಾಗೂ ಜೊತೆಗಿದ್ದ ವ್ಯಕ್ತಿ ಅನುಚಿತ ಸ್ಥಿತಿಯಲ್ಲಿ ವರ್ತಿಸಿ   ವೈದ್ಯೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page