ವ್ಯಕ್ತಿಯ ಸ್ಥಳದಲ್ಲಿ ತ್ಯಾಜ್ಯ ರಾಶಿ: ಅಪರಾಧ ತನಿಖೆ ಜ್ಯಾರಿದಳದಿಂದ ದಂಡ

ಕಾಸರಗೋಡು: ಚೆಂಗಳ ಪಂ ಚಾಯತ್‌ನ ಬೆಳ್ಳೂರಡ್ಕದಲ್ಲಿ ವ್ಯಕ್ತಿ ಯೊಬ್ಬರ ಹಿತ್ತಿಲಿನಲ್ಲಿ ತ್ಯಾಜ್ಯ ಸುರಿ ಯುತ್ತಿರುವುದನ್ನು ಅಪರಾಧ ತನಿಖೆ ಜ್ಯಾರಿದಳ ಪತ್ತೆಹಚ್ಚಿ ದಂಡ ವಿಧಿಸಿದೆ. ಸ್ಥಳದ ಮಾಲಕನಿಗೆ ೫೦,೦೦೦ ರೂ. ದಂಡ ವಿಧಿಸಲಾಗಿದೆ. ಮದುವೆ ಹಾಗೂ ಇತರ ಕಾರ್ಯಕ್ರಮಗಳ ಆಹಾರ ಅವಶಿಷ್ಟಗಳನ್ನು ಹಾಗೂ ವಿವಿಧ ಕಸಗಳನ್ನು ತಂದು ಇಲ್ಲಿ ರಾಶಿ ಹಾಕಲಾಗುತ್ತಿದೆ. ಇದನ್ನು ಪತ್ತೆಹಚ್ಚಿದ ತಂಡ ದಂಡ ವಿಧಿಸಿ ಎಚ್ಚರಿಕೆ ನೀಡಿದೆ. ತಂಡದಲ್ಲಿ ಕೆ.ವಿ. ಮೊಹ ಮ್ಮದ್ ಮದನಿ, ರಿಯಾಸ್, ಕೆ. ರಶ್ಮಿ, ಇ.ಕೆ. ಫಾಸಿಲ್ ಮೊದಲಾದ ಅಧಿಕಾರಿಗಳು ಭಾಗವಹಿಸಿದ್ದರು.

You cannot copy contents of this page