ವ್ಯಕ್ತಿ ಕೆಲಸ ನಿರ್ವಹಿಸುವ ಮನೆಯ ಮೆಟ್ಟಿಲಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ವ್ಯಕ್ತಿಯೊಬ್ಬರು ಕೆಲಸ ನಿರ್ವಹಿಸುವ ಮನೆಯ ಅಡುಗೆ ಕೋಣೆ ಭಾಗದ ಮೆಟ್ಟಿಲಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವೆಳ್ಳರಿಕುಂಡ್ ಚುಳ್ಳಿಕರ ನಿವಾಸಿ ಕಣ್ಣನ್ (60) ಮೃತಪಟ್ಟ ವ್ಯಕ್ತಿ. ಘಟನೆಗೆ ಸಂಬಂಧಿಸಿ ಪುತ್ರ ಕೆ. ಪ್ರದೀಪ್‌ರ ದೂರಿನಂತೆ ರಾಜಪುರಂ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.
ಈ ತಿಂಗಳ 10ರಂದು ಸಂಜೆ 3 ಗಂಟೆ ಹಾಗೂ 11ರಂದು ಬೆಳಿಗ್ಗೆ 8 ಗಂಟೆ ಮಧ್ಯೆ ಸಾವು ಸಂಭವಿಸಿರುವುದಾಗಿ ಸಂಶಯಿಸ ಲಾಗುತ್ತಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಕಣ್ಣನ್ ಕೆಲಸ ನಿರ್ವಹಿಸುವ ಚುಳ್ಳಿಕ್ಕರದ ಸುನಿಲ್‌ರ ಮನೆಯ ಅಡುಗೆ ಕೋಣೆ ಭಾಗದ ಮೆಟ್ಟಿಲಿನಲ್ಲಿ ಮೃತದೇಹ ಪತ್ತೆಯಾಗಿತ್ತು.