ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ವ್ಯಕ್ತಿಯೊಬ್ಬರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೇರೂರು ನಿವಾಸಿ ರಮೇಶ್ (60) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಮನೆ ಸಮೀಪದ ಮರದಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತ್ನಿ ಸುಮತಿ ನಿನ್ನೆ ಸಂಜೆ ಕುಟುಂಬಶ್ರೀ ಸಭೆಗೆ ತೆರಳಿದ್ದು, ಮರಳಿ ಬಂದಾಗ ಘಟನೆ ಅರಿವಿಗೆ ಬಂದಿದೆ.
ಮೃತರು ಪತ್ನಿ, ಮಕ್ಕಳಾದ ಹರಿಪ್ರಸಾದ್, ಶಿವಪ್ರಸಾದ್, ಅರುಣಾಕ್ಷಿ, ಸಹೋದರ ಚಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.