ವ್ಯಕ್ತಿ ಸ್ಮಶಾನದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಹೊಸದುರ್ಗ: ವ್ಯಕ್ತಿಯೊಬ್ಬರು ಸ್ಮಶಾನದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆರುವತ್ತೂರು ಕೈದಕ್ಕಾಡ್‌ತಕ್ ನಗರದ ಕೆ.ಎಂ.ಸಿ. ಶಾಹುಲ್ ಹಮೀದ್ (60) ಮೃತವ್ಯಕ್ತಿ. ಕೈದಕ್ಕಾಡ್ ಅಯ್ಯಂಗಾಳಿ ಸ್ಮಾರಕ ಕಮ್ಯೂನಿಟಿ ಹಾಲ್ ಸಮೀಪ ಸ್ಮಶಾನದಲ್ಲಿರುವ ಮರದಲ್ಲಿ ಇವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಹೋದರಿಯೊಂ ದಿಗೆ ವಾಸಿಸುತ್ತಿದ್ದ ಇವರು ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಗೆ ತೆರಳಿದ್ದು ಬಳಿಕ ಮರಳಿ ಬಂದಿರಲಿಲ್ಲವೆನ್ನಲಾಗಿದೆ. ಸಾವಿನ ಬಗ್ಗೆ ಸಂಬಂಧಿಕರು ಹಾಗೂ ನಾಗರಿಕರು ಸಂಶಯ ವ್ಯಕ್ತಪಡಿಸಿದುದರಿಂದ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಮಕ್ಕಳಾದ ಸಬೂರ, ಸಾಹಿದ, ಶಬಾನ, ಸಜಾದ್, ಶರ್ಬೀನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.