ವ್ಯಾನ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತ್ಯು
ಕಾಸರಗೋಡು: ವ್ಯಾನ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ನೀಲೇಶ್ವರ ಸಮೀಪದ ಕಾರ‍್ಯಂಗೋಡಿನ ಕೆ. ವೇಣು (58) ಸಾವನ್ನಪ್ಪಿದ ವ್ಯಕ್ತಿ. ಇವರು ಸ್ಕೂಟರ್‌ನಲ್ಲಿ ನಿನ್ನೆ ಪಳ್ಳಿಕ್ಕೆರೆಯಿಂದ ನೀಲೇಶ್ವಕ್ಕೆ ತೆರಳುತ್ತಿದ್ದ ವೇಳೆ ವ್ಯಾನೊಂದು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾ ಗಲಿಲ್ಲ. ಮೃತರು ಪತ್ನಿ ಯಮುನ, ಮಕ್ಕಳಾದ ವಿಷ್ಣು, ವರ್ಷಾ, ಸಹೋದರ-ಸಹೋದರಿ ಯರಾದ ಶಶಿ, ರಘು, ಆಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.