ವ್ಯಾಪಾರಿ ಕುಸಿದು ಬಿದ್ದು ಮೃತ್ಯು

ಪೆರ್ಲ: ವ್ಯಾಪಾರಿ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಬದಿಯಡ್ಕ ಬಳಿಯ ಕಾಡಮನೆ ನಿವಾಸಿ ಸಾದಿಕ್ (೩೫) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಪೆರ್ಲ ಪಟೆಯಲ್ಲಿ ರೆಡಿಮೇಡ್ ಬಟ್ಟೆ ಅಂಗಡಿ ನಡೆಸುತ್ತಿದ್ದರು. ನಿನ್ನೆ ರಾತ್ರಿ ೯.೩೦ರ ವೇಳೆ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ೧೦.೩೦ರ ವೇಳೆ ಅವರು ಹೃದಯಾಘಾತವುಂಟಾಗಿ ಕುಸಿದು ಬಿದ್ದಿದ್ದರು. ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ದಾರಿ ಮಧ್ಯೆ ನಿಧನ ಸಂಭವಿಸಿದೆ. ಅಬ್ದುಲ್ ರಹಿಮಾನ್- ಉಮ್ಮಾಲಿಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ತಾಹಿರ, ಮಕ್ಕಳಾದ ಫಾತಿಮತ್ ಸಾರ, ಸಲಫಿ, ಸಹೋದರ- ಸಹೋದರಿಯರಾದ ಇಕ್ಬಾಲ್, ಕರೀಂ, ತಾಹಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page