ಶಬರಿಮಲೆ: ಉಚಿತ ವಾಹನ ಸೌಕರ್ಯಕ್ಕಾಗಿ ಸು.ಕೋರ್ಟ್‌ಗೆ ವಿ.ಹಿಂ.ಪ ಅರ್ಜಿ : ವಿರೋಧ ವ್ಯಕ್ತಪಡಿಸಿದ ರಾಜ್ಯ ಸರಕಾರ

ಹೊಸದಿಲ್ಲಿ: ಶಬರಿಮಲೆ ತೀರ್ಥಾ ಟಕರಿಗಾಗಿ ನಿಲೈಕಲ್‌ನಿಂದ ಪಂಪಾ ತನಕ ಉಚಿತ ವಾಹನ ಸೌಕರ್ಯ ಏರ್ಪಡಿಸಲು ನಮಗೆ ಅನುಮತಿ ನೀಡುವಂತೆ ಕೋರಿ ವಿಶ್ವ ಹಿಂದೂ ಪರಿಷತ್ (ವಿ.ಹಿಂ.ಪ) ಸುಪ್ರೀ ಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಆದರೆ ಈ ಅರ್ಜಿಯನ್ನು ವಜಾ ಗೈಯ್ಯುವಂತೆ ಆಗ್ರಹಿಸಿ ಇನ್ನೊಂದೆಡೆ ಕೇರಳ ಸರಕಾರ ಅದಕ್ಕೆ ಪ್ರತಿ ಅಫಿದಾವಿತ್ ಸಲ್ಲಿಸಿದೆ. ಶಬರಿಮಲೆಯ ನಿಲೈಕಲ್‌ನಿಂದ ಪಂಪಾ ತನಕ ವಾಹನ ಸೌಕರ್ಯ ಏರ್ಪಡಿಸುವ ಅಧಿಕಾರ ರಾಜ್ಯ ಸರಕಾರದ ಸಾರಿಗೆ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ ಮಾತ್ರವೇ ಹೊಂದಿದೆ. ಶಬರಿಮಲೆ ತೀರ್ಥಾಟಕರಿಗೆ ಅಗತ್ಯದ ಎಲ್ಲಾ ಸೌಕರ್ಯಗಳನ್ನೂ  ಕೆಎಸ್‌ಆರ್ ಟಿಸಿ ಒದಗಿಸುತ್ತಿದೆ. ರಾಜ್ಯದ ೯೭ ಡಿಪೋಗಳಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಈ ರೂಟ್‌ನಲ್ಲಿ ಸೇವೆ ನಡೆಸುತ್ತಿವೆ.

ಶಬರಿಮಲೆ ತೀರ್ಥಾಟಕರಿಗೆ ಮಾತ್ರವಾಗಿ ಈ ವಿಶೇಷ ಬಸ್ ಸೇವೆ ನಡೆಸಲಾಗುತ್ತಿದೆ. ಆದ್ದರಿಂದ ಶಬರಿಮಲೆಗೆ ಅಗತ್ಯದ ಬಸ್ ಸೇವೆಗಳಿಲ್ಲವೆಂಬ ವಿಹಿಂಪದ ವಾದ ಸಹಿಯಲ್ಲ. ರಾಜ್ಯ ಸರಕಾರ ನಿಗದಿಪಡಿಸಿದ ವಿಶೇಷ ದರವನ್ನು ಮಾತ್ರವೇ ಈ ಬಸ್‌ಗಳಲ್ಲಿ ತೀರ್ಥಾಟP ರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿದಾ ವಿತ್‌ನಲ್ಲಿ ರಾಜ್ಯ ಸರಕಾರ ಹೇಳಿದೆ.

ನಿಲೈಕಲ್‌ನಿಂದ ಪಂಪಾ ತನಕ ೨೬ ಬಸ್‌ಗಳನ್ನು ಬಾಡಿಗೆ ಪಡೆದುಕೊಂಡು ಅವುಗಳನ್ನು ಶಬರಿಮಲೆ ಭಕ್ತರಿಗಾಗಿ ಉಚಿತ ಯಾತ್ರಾ ಸೌಕರ್ಯ ಒದಗಿ ಸಲು ವಿಶ್ವ ಹಿಂದೂ ಪರಿಷತ್ ಮುಂ ದಾಗಿದೆ. ಆದರೆ ಅದಕ್ಕೆ ರಾಜ್ಯ ಸರಕಾರ ಅನುಮತಿ ನೀಡಿಲ್ಲ. ಆದ್ದರಿಂದ ಅದಕ್ಕೆ ನಮಗೆ ಅನುಮತಿ ನೀಡಬೇಕೆಂದು ಕೋರಿ ವಿಶ್ವ ಹಿಂದೂ ಪರಿಷತ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಶಬರಿಮಲೆಗೆ ಉಚಿತ ಬಸ್ ಸೌಕರ್ಯ ಏರ್ಪಡಿಸುವ ವಿಹಿಂಪದ ಆಗ್ರಹವನ್ನು ಅಂಗೀಕರಿಸುವಂತಿಲ್ಲ. ಅದನ್ನು ಅಂಗೀಕರಿಸುವ ರೀತಿಯ ಯಾವುದೇ ಸ್ಕೀಂಗಳೂ ಕೇರಳದಲ್ಲಿಲ್ಲ. ಹೀಗೆ ವಿಶೇಷ ಬಸ್‌ಸೇವೆಗೆ ಅನುಮತಿ ನೀಡುವುದು ಪರ್ಮಿಟ್ ನಿಬಂಧನೆಗಳ ಉಲ್ಲಂಘನೆಯೂ ಆಗಲಿದೆ ಎಂದು ಕೇರಳ ಸರಕಾರದ ಪರವಾಗಿ ಸ್ಟಾಂಡಿಂಗ್ ಕೌನ್ಸಿಲ್ ನಿಶಾರಾಜನ್ ಶೋಂಕಾರ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ.

ಆದರೆ ಈ ವಿಷಯದಲ್ಲಿ ಸುಪ್ರಿಂಕೋರ್ಟ್ ನೀಡುವ ತೀರ್ಪು ಅತೀ ನಿರ್ಣಾಯಕವಾಗಲಿದೆ. ಅದು ಏನಾಗಿರಬಹುದೆಂಬುದನ್ನು ಶಬರಿಮಲೆ ತೀರ್ಥಾಟಕರು ಅತೀ ಖಾತರದಿಂದ ಕಾಯತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page