ಶಬರಿಮಲೆ: ಮಂಡಲ, ಮಕರಜ್ಯೋತಿ ಉತ್ಸವ ಸಂಪನ್ನ
ಶಬರಿಮಲೆ: ಮಂಡಲ, ಮಕರ ಜ್ಯೋತಿ ಉತ್ಸವ ಸಮಾಪ್ತಿಗೊಂಡು ಪಂದಳ ರಾಜ ಪ್ರತಿನಿಧಿ ರಾಜರಾಜ ವರ್ಮ ಅವರ ದರ್ಶನದೊಂದಿಗೆ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬಾಗಿಲು ನಿನ್ನೆ ಬೆಳಿಗ್ಗೆ ಮುಚ್ಚಲಾಯಿತು.
ನಿನ್ನೆ ಮುಂಜಾನೆ 5 ಗಂಟೆಗೆ ಕ್ಷೇತ್ರದ ಬಾಗಿಲು ತೆರೆದ ಬಳಿಕ ಪೂರ್ವ ಮಂಟಪದಲ್ಲಿ ಗಣಪತಿ ಹೋಮ ನಡೆಯಿತು. ಅನಂತರ ತಿರುವಾಭವರಣಗಳನ್ನು ಪಂದಳ ಅರಮನೆಗೆ ಮರಳಿ ಕೊಂ ಡೊಯ್ಯಲಾ ಯಿತು. ರಾಜಪ್ರತಿನಿಧಿ ಕ್ಷೇತ್ರಕ್ಕೆ ಭೇಟಿನೀಡಿ ದೇವರ ದರ್ಶನ ನಡೆಸಿದ ಬಳಿಕ ಮುಖ್ಯ ಅರ್ಚಕ ಅರುಣ್ ಕುಮಾರ್ ನಂಬೂದಿರಿ ಶ್ರೀ ಅಯ್ಯಪ್ಪ ವಿಗ್ರಹಕ್ಕೆ ಭಸ್ಮಾಭಿಷೇಕ ನಡೆಸಿದರು. ಹರಿವರಾಸನಂ ಹಾಡಿದ ಬಳಿಕ ದೀಪ ನಂದಿಸಿ ಮುಖ್ಯ ಅರ್ಚಕ ಗರ್ಭಗು ಡಿಯ ಹೊರಗಿಳಿದು ಬಾಗಿಲು ಮುಚ್ಚಿ ಕೀಲಿಕೈಯನ್ನು ರಾಜಪ್ರತಿನಿಧಿಗೆ ಹಸ್ತಾಂತರಿಸಿದರು. ಹದಿನೆಂಟು ಮೆಟ್ಟಿಲಿಳಿದು ದೇವಸ್ವಂ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕೀಲಿಕೈಯನ್ನು ಅಡ್ಮಿನಿ ಸ್ಟ್ರೇಟಿವ್ ಆಫೀಸರ್‌ಗೆ ಹಸ್ತಾಂತರಿ ಸಲಾಯಿತು. ಜನವರಿ 23ರಂದು ತಿರುವಾಭರಣ ಶೋಭಾಯಾತ್ರೆ ಪಂದಳ ಅರಮನೆಗೆ ತಲುಪಲಿದೆ.
ಇದೇ ವೇಳೆ ಕಳೆದ ವರ್ಷಕ್ಕಿಂತ 10 ಲಕ್ಷಕ್ಕೂ ಹೆಚ್ಚು ತೀರ್ಥಾಟಕರು ಈ ಬಾರಿ ಕ್ಷೇತ್ರ ದಶನ ನಡೆಸಿದರು. ಅದೇ ರೀತಿ ಆದಾಯದಲ್ಲೂ ಭಾರೀ ಹೆಚ್ಚಳ ಉಂಟಾಗಿದೆ.