ಶಾರದಾ ಆರ್ಟ್ಸ್ ಕಲಾವಿದರು ಬೆಳ್ಳಿಹಬ್ಬ ಸಂಭ್ರಮ: ಎಡನೀರು ಶ್ರೀಯಿಂದ ಉದ್ಘಾಟನೆ
ಮಂಜೇಶ್ವರ: ಶಾರದಾ ಆರ್ಟ್್ಸ ಕಲಾವಿದರು ಮಂಜೇಶ್ವರ ಇದರ ಬೆಳ್ಳಿಹಬ್ಬಸಂಭ್ರಮ ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವ ಕ್ಷೇತ್ರದ ವಠಾರದಲ್ಲಿ ನಿನ್ನೆಯಿಂದ ಆರಂಭ ಗೊಂಡಿದ್ದು, ನಾಳೆ ಸಮಾಪ್ತಿಗೊಳ್ಳ ಲಿದೆ. ನಿನ್ನೆ ಬೆಳಿಗ್ಗೆ ಗಣಹೋಮ, ಶಾರದಾ ಪೂಜೆ, ಮಹಾಪೂಜೆ ಬಳಿಕ ಬೆಳ್ಳಿಹಬ್ಬ ಸಂಭ್ರಮ ನಡೆದಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಾಟಕ ರಂಗದಲ್ಲಿ ಅನೇಕ ರೀತಿಯ ಬದಲಾವಣೆ ಆಗಿದ್ದು, ಹೊಸ ಅಲೆಯ ನಾಟಕದ ಮೂಲಕ ಸಮಾಜದ ಪ್ರೇಕ್ಷಕರನ್ನು ಸೆಳೆ ಯುವಲ್ಲಿ ಪರಿಣಾಮಕಾರಿ ಯಾಗಿದೆ. ಹೊಸ ಸಂದೇಶಗಳನ್ನು, ಒಳ್ಳೆಯ ಸಂದೇಶಗಳನ್ನು ಸಮಾಜಕ್ಕೆ ನೀಡುವಲ್ಲಿ ನಾಟಕಗಳು ಮಹತ್ವದ ಪಾತ್ರಗಳನ್ನು ವಹಿಸುತ್ತಾ ಇದೆ. ಸಾಮಾಜಿಕ, ಪೌರಾಣಿಕ, ಚಾರಿತ್ರಿಕ ನಾಟಕಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಕ್ತಾ ಇದೆ. ಇನ್ನಷ್ಟು ಒಳ್ಳೆಯ ಕಾರ್ಯಗಳು, ಒಳ್ಳೆಯ ನಾಟಕಗಳು ಶಾರದಾ ಆರ್ಟ್್ಸ ಸಂಸ್ಥೆಯ ಮೂಲಕ ಮತ್ತೆ ಬೆಳಕಿಗೆ ಬರಲಿ ಎಂದು ಹಾರೈಸಿದರು. ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತಾ ನಾನು ಕೂಡಾ ಪೂರ್ವಾಶ್ರಮದ ಸಮಯದಲ್ಲಿ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದೆ. ಅನೇಕ ಪಾತ್ರಗಳನ್ನು ನಿರ್ವಹಿಸಿದ್ದೆ. ತಂಡವನ್ನು ಕಟ್ಟಿ ಬೆಳೆÀಸುವಲ್ಲಿ ಅದರ ಕಷ್ಟ ನಷ್ಟಗಳು ಅದರ ಸಿಹಿ ಕಹಿಗಳೆಲ್ಲ ನನಗೆ ಅನುಭವ ಇದೆ. ಅದರಿಂದಾಗಿ ಕೃಷ್ಣಣ್ಣನವರು ಮಾಡುವಂತ ಅವರ ಈ ತಂಡದ ಶ್ರಮ ನನಗೆ ಗೊತ್ತಿದೆ.
ಇನ್ನಷ್ಟು ಒಳ್ಳೆಯ ನಾಟಕಗಳು ಅವರಿಂದ ಮೂಡಿ ಬರಲಿ 25 ವರ್ಷದ ಈ ಸಮಾರಂಭದAತೆ ಮುಂದೆ 50ವರ್ಷ ಸಮಾರಂಭ ಕೂಡಾ ನಡೆಯಲಿ ಎಂದು ಆಶೀರ್ವಚನದಲ್ಲಿ ಹೇಳಿದರು. ಉದ್ಯಾವರ ಮಾಡ ಕ್ಷೇತ್ರದ ಅಡಳಿತ ಮೊಕ್ತೇಸರ ಕಿರಣ್ ಶೆಟ್ಟಿ ಮಾಡ ಅಧ್ಯಕ್ಷತೆ ವಹಿಸಿದರು.
ಮಾಡ ಕ್ಷೇತ್ರ ತಮ್ಮ ದೈವದ ಅರ್ಚಕ ಬೀರು ಚೌಟ, ತಮ್ಮ ದೈವದ ಪಾತ್ರಿ ತಿಮಿರಿ ಬೆಳ್ಚಪ್ಪಾಡ, ಮಾಡ ಕ್ಷೇತ್ರದ ಮುಂಡಲ್ತಾಯ ದೈವದ ಪಾತ್ರಿ ಮಂಜು ಬೆಳ್ಚಪ್ಪಾಡ, ಕನಿಲ ಭಗವತೀ ಕ್ಷೇತ್ರದ ಉದಯ ಆತಾರ್, ಎಸ್.ಎನ್ ಕಡಂಬಾರು, ಕೃಷ್ಣ ಶಿವಕೃಪಾ ಕುಂಜತ್ತೂರು, ಜಯರಾಮ ಶೆಟ್ಟಿ ಕಜೆಕೋಡಿ, ಪದ್ಮನಾಭ ಕಡಪ್ಪರ, ಶೇಖರ್ ಕನೀರ್ ತೋಟ, ಆಶಾ ಶೆಟ್ಟಿ ಅತ್ತಾವರ, ತಮ್ಮ ಲಕ್ಷ÷್ಮಣ್, ದಯಾಕರ ಮಾಡ, ತಿಲಕ್ ಪ್ರಸಾದ್ ಕಡೆಕಳಕಟ್ಟೆ, ನರೇಂದ್ರ ಹೆಗ್ಡೆ ಹೊಸಂಗಡಿ, ರವಿ ಮುಡಿಮಾರ್, ಕೃಷ್ಣಪ್ಪ ಪೂಜಾರಿ ಬಡಾಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಂಜುನಾಥ ಅಡಪ ಸಂಕಬೈಲು, ಲೀಲಾವತಿ ಕೇಶವ, ನಾಗಮ್ಮ ಪೊಯ್ಯಕಂಡ, ಉಷಾ ಸದಾನಂದ ಆರಿಕ್ಕಾಡಿ, ರಾಜೇಶ್ ಮಂಜೇಶ್ವರ, ನಾಗರಾಜ್ ರಾವ್ ವರ್ಕಾಡಿ ಇವರನ್ನು ಸನ್ಮಾನಿಸಲಾಯಿತು. ಮಾತೆಯರು ಪ್ರಾರ್ಥನೆ ಹಾಡಿದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿ, ದಿನಕರ ಹೊಸಂಗಡಿ ನಿರೂ¥ಸಿ, ವಂದಿಸಿದರು.