ಶಾಲಾ ಕಟ್ಟಡದಿಂದ ಕೆಳಕ್ಕೆ ಜಿಗಿದು ಪ್ಲಸ್‌ಟು ವಿದ್ಯಾರ್ಥಿನಿ ಗಂಭೀರ ಗಾಯ

ಕಾಸರಗೋಡು:  ತರಗತಿ ನಡೆಯುತ್ತಿರುವಂತೆಯೇ ಪ್ಲಸ್‌ಟು ವಿದ್ಯಾರ್ಥಿನಿ ಯೋರ್ವೆ  ಶಾಲಾ ಕಟ್ಟಡದಿಂದ ಕೆಳಕ್ಕೆ ಜಿಗಿದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೇಕಲ ಉಪ ಶಿಕ್ಷಣ  ಉಪಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.  ತರಗತಿ ಕೊಠಡಿಯಲ್ಲಿ ಭಾಷಾ ಕ್ಲಾಸ್ ಆರಂಭಗೊಂಡಾಗ ಈ ವಿದ್ಯಾರ್ಥಿನಿ ಅಲ್ಲಿಂದ ಇನ್ನೊಂದು ತರಗತಿ ಕೊಠಡಿಗೆ  ಹೋಗುತ್ತಿರುವಂತೆಯೇ ಆ ಶಾಲಾ ಕಟ್ಟಡದ ಒಂದನೇ ಮಹಡಿಯಿಂದ ದಿಢೀರ್ ಆಗಿ ಕೆಳಕ್ಕೆ ಜಿಗಿದಿದ್ದಾಳ. ಅದನ್ನು ಕಂಡ ಅಧ್ಯಾಪಕರು ಮತ್ತಿತರರು ಸೇರಿ ಆಕೆಯನ್ನು ಮೊದಲು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಉನ್ನತ ಮಟ್ಟದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ.  ಈ ವಿದ್ಯಾರ್ಥಿನಿ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿ ದ್ದಳು. ಅದರಿಂದಾಗಿ ತರಗತಿಯಲ್ಲಿ ತನ್ನ ಸಹಪಾಠಿಗಳು ತನ್ನಲ್ಲಿ ಮಾತ ನಾಡುತ್ತಿಲ್ಲವೆಂದೂ, ಆ ಮನೋ ವೇದನೆಯಿಂದ ತಾನು ಕಟ್ಟಡದಿಂದ ಕೆಳಕ್ಕೆ ಜಿಗಿದಿರುವುದಾಗಿ ಆ ವಿದ್ಯಾ ರ್ಥಿನಿ ಹೆತ್ತವರಲ್ಲಿ ತಿಳಿಸಿದ್ದಾಳೆನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page