ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ

ತಿರುವನಂತಪುರ: ಕ್ರಿಸ್ಮಸ್ ಆಚರಣೆ ನಡೆಯುತ್ತಿದ್ದಂತೆ ಶಾಲಾ ವಿದ್ಯಾರ್ಥಿನಿಗೆ ತರಗತಿ ಕೊಠಡಿಯೊಳಗೆ ಹಾವು ಕಡಿದ ಘಟನೆ ನಡೆದಿದೆ. ನೆಯ್ಯಾಟಿಂಗರ ಬಳಿಯ ಚೆಂಗಲ್ ಸರಕಾರಿ ಯುಪಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ನೇಹ (12) ಎಂಬಾಕೆಗೆ ಹಾವು ಕಡಿದಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಹಾವಿನ ಕಡಿತಕ್ಕೊಳಗಾದ ಬಾಲಕಿಯನ್ನು ಅಧ್ಯಾಪಕರು ಕೂಡಲೇ ನೆಯ್ಯಾಟಿಂಗರದ ಆಸ್ಪತ್ರೆಗೆ ತಲುಪಿಸಿದ್ದಾರೆ. ಬಾಲಕಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲವೆಂದು  ಆಸ್ಪತ್ರೆ ಮೂಲಗಳು ತಿಳಿಸಿವೆ. ಇದೇ ವೇಳೆ ಕಡಿದ ಹಾವನ್ನು ಶಾಲಾ ಅಧಿಕಾರಿಗಳು ಹೊಡೆದು ಕೊಂದಿದ್ದಾರೆ.

RELATED NEWS

You cannot copy contents of this page