ಶಾಲಾ ಬಸ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು
ಹೊಸದುರ್ಗ: ಖಾಸಗಿ ಶಾಲೆಯೊಂದರ ಬಸ್ ಢಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಹೊಸದುರ್ಗ ನೋರ್ತ್ ಕೋಟಚ್ಚೇರಿಯಲ್ಲಿ ನಡೆದಿದೆ. ಹೊಸದುರ್ಗ ಕಿಳಿಕುಂಗರೆ ಮಣಾಲಿನ ಎಂ. ಕೃಷ್ಣನ್ (75) ಸಾವನ್ನಪ್ಪಿದ ದುರ್ದೈವಿ. ನಿನ್ನೆ ಸಂಜೆ ಈ ಅಪಘಾತ ನಡೆದಿದೆ. ಅಪರಿಮಿತ ವೇಗದಲ್ಲಿ ಬಂದ ಶಾಲಾ ಬಸ್ ರಸ್ತೆ ಬದಿ ನಡೆದು ಹೋಗುತ್ತಿದ್ದ ಕೃಷ್ಣನ್‌ರಿಗೆ ಢಿಕ್ಕಿ ಹೊಡೆದಿದೆ. ಬಳಿಕ ಸ್ಕೂಟರ್‌ಗೆ ಹಾಗೂ ಇನ್ನಷ್ಟೇ ನೋಂದಾವಣೆ ನಡೆಸಬೇಕಾದ ಹೊಸ ಕಾರೊಂದಕ್ಕೆ ಢಿಕ್ಕಿ ಹೊಡೆದಿದೆ. ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಕೃಷ್ಣನ್‌ರನ್ನು ಕೂಡಲೇ ಕಾಞಂಗಾಡ್‌ನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಚಿತ್ತಾರಿ ಅಸೀಸಿಯ ಇಂಗ್ಲಿಷ್ ಮೀಡಿಯಂ ಶಾಲೆಯ ಬಸ್ ಅಪಘಾತ ಸೃಷ್ಟಿಸಿದೆ. ಈ ಬಸ್‌ನಲ್ಲಿ ವಿದ್ಯಾರ್ಥಿಗಳೂ ಇದ್ದರು. ಅವರಿಗೆ ಯಾವುದೇ ಗಾಯವಾಗಲಿಲ್ಲ.ಮೃತ ಕೃಷ್ಣನ್ ಸಹೋದರ ಸಹೋದರಿಯರಾದ ರಾಮನ್, ಕಮ್ಮಾಡತ್ತು, ಮಾಧವಿ, ಶಾರದ, ಅಶೋಕನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.