ಶಾಲಾ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿ ಲೈಂಗಿಕ ಕಿರುಕುಳ: ಅಧ್ಯಾಪಕ ಸೆರೆ
ಕೊಲ್ಲಂ: ಶಾಲಾ ವಿದ್ಯಾ ರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಇಬ್ಬರು ಶಾಲಾ ಅಧ್ಯಾಪಕರು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕೊಲ್ಲಂನಲ್ಲಿ ನಡೆದಿದೆ.
ಇದಕ್ಕೆ ಸಂಬಂಧಿಸಿ ಕೊಲ್ಲಂ ಒಯೂರು ಮೋಟಾರ್‌ಕುನ್ನು ಕುಳವಿಲ ವೀಡ್ ನಿವಾಸಿ ಉರ್ದು ಅಧ್ಯಾಪಕ ಶಮೀರ್ (35) ಎಂಬಾತನನ್ನು ಪುಯಪಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದೇ ಶಾಲೆಯ ಇನ್ನೋರ್ವ ತಾತ್ಕಾಲಿಕ ಅಧ್ಯಾಪಕ ಸರಿನ್ ಎಂಬಾತನ ವಿರುದ್ಧವೂ ವಿದ್ಯಾರ್ಥಿನಿ ದೂರು ನೀಡಿದ್ದು, ಆತನನ್ನು ಶೀಘ್ರ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಈ ಇಬ್ಬರು ವಿದ್ಯಾರ್ಥಿನಿ ಕಲಿಯುತ್ತಿರುವ ಶಾಲೆಯ ಅಧ್ಯಾಪಕರೂ ಆಗಿದ್ದಾರೆ. ತಾನು ಶಾಲೆ ಬಿಟ್ಟು ಹಿಂತಿರುಗುತ್ತಿದ್ದ ದಾರಿ ಮಧ್ಯೆ ಈ ಇಬ್ಬರು ಅಧ್ಯಾಪಕರು ತನ್ನನ್ನು ಬಲವಂತವಾಗಿ ಕಾರಿಗೇರಿಸಿ ಸಾಗಿಸಿ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿ ಆರೋಪಿಸಿದ್ದಾಳೆ. ಅದಾದ ನಂತರ ಆರೋಪಿಗಳು ಕಾರಿನಲ್ಲಿ ಮುಂದೆ ಸಾಗುತ್ತಿದ್ದ ವೇಳೆ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿರುವುದನ್ನು ಕಂಡ ಆರೋಪಿಗಳು ಹೆದರಿ ಕಾರನ್ನು ಬೇರೆ ದಾರಿಯಾಗಿ ಸಾಗಿಸಿ ದಾರಿ ಮಧ್ಯೆ ತನ್ನನ್ನು ಕಾರಿನಿಂದ ಇಳಿಸಿದ ಬಳಿಕ ಕಾರನ್ನು ಅಲ್ಲೇ ಉಪೇ ಕ್ಷಿಸಿ ತಲೆಮರೆಸಿಕೊಂಡರೆಂದು ಬಾಲಕಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.
ಮತಾಂತರಗೊಳಿಸಿ ತಾನು ನಿನ್ನನ್ನು ಮದುವೆಯಾಗುವುದಾಗಿಯೂ, ನಡೆದ ವಿಷಯವನ್ನು ಬಹಿರಂಗಪಡಿಸಿದಲ್ಲಿ ನಿನ್ನನ್ನು ಅಪಾಯಕ್ಕೊಳಪಡಿ ಸುವುದಾಗಿ ಅಧ್ಯಾಪಕ ಶಮೀರ್ ತನಗೆ ಬೆದರಿಕೆಯೊಡ್ಡಿದನೆಂದೂ ಬಾಲಕಿ ಆರೋಪಿಸಿದ್ದಾಳೆ.
ಭಯದಿಂದಾಗಿ ನಡೆದ ವಿಷಯವನ್ನು ಬಾಲಕಿ ಅಲ್ಲಿಗೇ ಬಚ್ಚಿಡುವ ಪ್ರಯತ್ನವನ್ನು ನಡೆಸಿದ್ದಳು. ನಂತರ ಚೈಲ್ಡ್ ವೆಲ್‌ಫೇರ್ ತಂಡ ಆಕೆಯನ್ನು ಕೌನ್ಸಿಲಿಂಗ್‌ಗೊಳಪಡಿಸಿ ದಾಗ ಆಕೆ ನಡೆದ ವಿಷಯಗಳನ್ನು ಅವರಲ್ಲಿ ತಿಳಿಸಿದ್ದಾಳೆ. ಅದರಂತೆ ಚೈಲ್ಡ್ ವೆಲ್‌ಫೇರ್ ತಂಡ ನೀಡಿದ ಮಾಹಿತಿಯಂತೆ ಪುಯಪಳ್ಳಿ ಪೊಲೀಸರು ಆ ಬಗ್ಗೆ ಪೋಕ್ಸೋ ಪ್ರಕರಣ ದಾಖಲಿಸಿ ಅದರಂತೆ ಓರ್ವ ಅಧ್ಯಾಪಕನನ್ನು ಬಂಧಿಸಿದ್ದಾರೆ.