ಶಿಥಿಲಗೊಂಡ ಶಾಲೆಯ ಆವರಣ ಗೋಡೆ: ಅಪಾಯಕ್ಕೆ ಆಹ್ವಾನ

ಮಂಜೇಶ್ವರ: ಉದ್ಯಾವರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಬಿರುಕು ಬಿಟ್ಟಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಮಂಜೇಶ್ವರ ರೈಲ್ವೇ ಗೇಟ್ ಸಮೀಪದಲ್ಲಿರುವ ಈ ಶಾಲೆಯ ಆವರಣ ಗೋಡೆ ಶಿಥಿಲಾವಸ್ಥೆಯಲ್ಲಿ ಇರುವುದರಿಂದ, ವಿದ್ಯಾರ್ಥಿಗಳ ಸುರಕ್ಷತೆಗೆ ಆತಂಕ ಸೃಷ್ಟಿಸಿದೆ.ಈ ಗೋಡೆಯ ಸಮೀಪದಲ್ಲೇ ಮಕ್ಕಳು ಪ್ರತಿದಿನವೂ ಸಂಚರಿಸುತ್ತಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ವಾಹನಗಳು ನಿಲ್ಲಿಸುವ ಸ್ಥಳವಾಗಿದೆ. ಜೋರಾಗಿ ಬರುವ ಮಳೆಯ ಪರಿಣಾಮ ಈ ಗೋಡೆ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲಲ್ಲಿ ಗೋಡೆ ಕುಸಿದು ದುರಂತ ಸಂಭವಿಸುವ ಮೊದಲು ಸಂಬAಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಗಮನ ಹರಿಸಬೇಕು ಎಂದು ಸ್ಥಳ ಸಂದರ್ಶಿಸಿದ ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಮುಂದಾಳು ಇಬ್ರಾಹಿಂ ಕುಂತೂರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page