ಶಿರಿಯ ರೈಲು ಹಳಿ ಸಮೀಪ ಪತ್ತೆಯಾದ ಮಾನವ ತಲೆಬುರುಡೆ, ಅಸ್ಥಿಪಂಜರ ಪರಿಯಾರಂಗೆ: ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ತನಿಖೆ ಆರಂಭ; ಸಾವಿನಲ್ಲಿ ನಿಗೂಢತೆ
ಕುಂಬಳೆ: ಶಿರಿಯಾದಲ್ಲಿ ರೈಲು ಹಳಿ ಸಮೀಪ ಪೊದೆಗಳೆಡೆ ಪತ್ತೆಯಾದ ಮನುಷ್ಯನ ತಲೆಬುರುಡೆ ಸಹಿತ ಅಸ್ಥಿಪಂಜರವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಅಸ್ಥಿಪಂಜರವನ್ನು ಫಾರೆನ್ಸಿಕ್ ಪರಿಶೀಲನೆ ನಡೆಸಿ ಸಾವಿಗೆ ಕಾರಣ ಹಾಗೂ ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಲು ಸಾಧ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಅಪರಾಹ್ನ 3 ಗಂಟೆ ವೇಳೆ ರೈಲು ಹಳಿ ಸಮೀಪದಲ್ಲಾಗಿ ನಡೆದು ಹೋದ ವರಿಗೆ ಅಸ್ಥಿಪಂಜರ ಕಂಡುಬಂದಿ ರುವುದಾಗಿ ಹೇಳಲಾಗುತ್ತದೆ. ಅವರು ನೀಡಿದ ಮಾಹಿತಿಯಂತೆ ಕುಂಬಳೆ ಠಾಣೆ ಎಸ್‌ಐ ವಿ.ಕೆ.ವಿಜಯನ್ ನೇತೃತ್ವದ ಪೊಲೀಸರು ತಲುಪಿ ಅಸ್ಥಿಪಂಜರವನ್ನು ಸಂಗ್ರಹಿಸಿದ್ದಾರೆ. ಅಸ್ಥಿಪಂಜರ ಪತ್ತೆಯಾದ ಸ್ಥಳದಲ್ಲಿ ನಸು ಗುಲಾಬಿ ಬಣ್ಣದ ಟಿ ಶರ್ಟ್ ಹಾಗೂ ಒಂದು ಬರ್ಮುಡ ಪತ್ತೆಯಾಗಿದೆ. ಇದು ಮೃತ ವ್ಯಕ್ತಿಯದ್ದಾಗಿರಬಹುದೇ ಎಂದು ಪರಿಶೀಲನೆ ನಡೆಯುತ್ತಿದೆ. ತಲೆಬುರುಡೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ಇದೇ ಹೇಗೆ ಸಂಭವಿಸಿದೆಯೆಂದು ಫಾರೆನ್ಸಿಕ್ ತನಿಖೆ ಮೂಲಕ ಪತ್ತೆಹಚ್ಚಬೇಕಾಗಿದೆ.
ರೈಲು ಗಾಡಿ ಢಿಕ್ಕಿ ಹೊಡೆದು ದರ ಪರಿಣಾಮ, ರೈಲಿನಿಂದ ಹೊರಕ್ಕೆಸೆದಾಗ ಈ ಗಾಯ ಉಂಟಾಗಿರಬಹುದೆಂದೂ, ಅಥವಾ ವ್ಯಕ್ತಿಯನ್ನು ಕೊಲೆಗೈದು ಮೃತದೇಹ ಇಲ್ಲಿ ಉಪೇಕ್ಷಿಸಿರ ಬಹುದೇ ಮುಂತಾದ ಸಂಶಯ ಹುಟ್ಟಿಕೊಂಡಿದೆ. ಆರು ತಿಂಗಳ ಹಿಂದೆ ಸಾವು ಸಂಭವಿಸಿರ ಬಹುದೆಂದು ಅಂದಾಜಿಸ ಲಾಗಿದೆ.ಆದರೆ ಇದುವರೆಗೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ.
ಇದೇ ವೇಳೆ ಮೃತ ವ್ಯಕ್ತಿ ಯಾರು? ಸಾವು ಹೇಗೆ ಸಂಭವಿಸಿದೆ ಯೆಂದು ಸಮಗ್ರ ತನಿಖೆ ಮೂಲಕವೇ ತಿಳಿಯಬಹುದಾಗಿದೆಯೆಂದು ಪೊಲೀಸರು ತಿಳಿಸುತ್ತಿದ್ದಾರೆ.