ಶಿರೂರು: ಅರ್ಜುನ್‌ಗಾಗಿ ಮತ್ತೆ ಶೋಧ

ಮಂಗಳೂರು: ಕರ್ನಾಟಕದ ಶಿರೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡೆ ಕುಸಿದು ಬಿದ್ದ ಪರಿಣಾಮ ನಾಪತ್ತೆಯಾದ ಲಾರಿ ಚಾಲಕ ಕಲ್ಲಿಕೋಟೆ ನಿವಾಸಿ ಅರ್ಜುನ್‌ರ ಪತ್ತೆ ಹಚ್ಚುವ ಕಾರ್ಯ ಪುನರಾರಂಭಿಸ ಲಾಗುವುದು. ಹವಾಮಾನ ಅನು ಕೂಲವಾಗಿದ್ದಲ್ಲಿ ಗೋವಾದಿಂದ ನಾಳೆ ಡ್ರಜ್ಜರ್ ತಲುಪಿಸಲಾ ಗುವುದು. ಗಂಗಾವಳಿ ಹೊಳೆಯಲ್ಲಿ ಇದೀಗ ನೀರಿನ ಮಟ್ಟ ಕಡಿಮೆ ಯಾಗಿದ್ದು ಇದರಿಂದ ಶೋಧ ನಡೆಸಲು ಸಾಧ್ಯವಿದೆ ಎಂದು ಅಂದಾಜಿಸಲಾಗಿದೆ. ಗೋವಾದಿಂದ ಶಿರೂರಿಗೆ ಡ್ರಜ್ಜರ್ ತಲುಪಲು 30-40 ಗಂಟೆಗಳು ಬೇಕಾಗಿ ಬರಲಿದೆ. ಹಾಗಾದಲ್ಲಿ ಶುಕ್ರವಾರ ಅಥವಾ ಶನಿವಾರ ಶೋಧ ರಂಭಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.

You cannot copy contents of this page