ಶಿರೂರು ಭೂಕುಸಿತ  ನಾಪತ್ತೆಯಾದವರಿಗಾಗಿ ಶೋಧ ಮುಂದುವರಿಕೆ

ಮಂಗಳೂರು: ಶಿರೂರಿನಲ್ಲಿ ಸಂಭವಿಸಿದ ಭೂ ಕುಸಿತ ವೇಳೆ ನಾಪತ್ತೆಯಾದ ಕಲ್ಲಿಕೋಟೆ ನಿವಾಸಿ ಲಾರಿ ಚಾಲಕ ಅರ್ಜುನ್‌ರ ಪತ್ತೆಗಾಗಿ   ಶೋಧ ಇಂದು ಕೂಡಾ ಮುಂದುವರಿ ಯುತ್ತಿದೆ.  ಗಂಗಾವಳಿ ಹೊಳೆಯಲ್ಲಿ ಇಂದು ಶೋಧ ನಡೆಯುತ್ತಿದೆ.  ಭೂಸೇನೆ, ನೌಕಾಸೇನೆ ಸಂಯುಕ್ತ ವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಒಂಭತ್ತು ದಿನಗಳಿಂದ ಶೋಧ ನಡೆಸುತ್ತಿದ್ದರೂ  ಅರ್ಜುನ್‌ರನ್ನು ಪತ್ತೆಹಚ್ಚಲಾಗಲಿಲ್ಲ. ಅತ್ಯಾಧುನಿಕ ಯಂತ್ರೋಪಕರಣ ಗಳನ್ನು ಶೋಧ ಕಾರ್ಯಕ್ಕಾಗಿ ಬಳಸ ಲಾಗುತ್ತಿದೆ. ಅರ್ಜುನ್ ಮಾತ್ರವಲ್ಲದೆ ಇತರ ನಾಲ್ಕು ಮಂದಿ ಕೂಡ ನಾಪತ್ತೆ ಯಾಗಿದ್ದಾರೆಂದು ಹೇಳಲಾಗುತ್ತಿದೆ.

You cannot copy contents of this page