ಶ್ರೀಕೃಷ್ಣ ಜನ್ಮಾಷ್ಟಮಿ: ಕುಟ್ಟಿಕ್ಕೋಲ್‌ನಲ್ಲಿ ಧ್ವಜ ತೋರಣ ನಾಶ

ಕುಟ್ಟಿಕ್ಕೋಲ್: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಕ್ಷೇತ್ರ ಪರಿಸರದಲ್ಲಿ ಸ್ಥಾಪಿಸಲಾದ ಧ್ವಜ ತೋರಣಗಳನ್ನು ಬೈಕ್‌ಗಳಲ್ಲಿ ತಲುಪಿದ ತಂಡ ನಾಶಗೊಳಿಸಿದೆ. ಈ ಘಟನೆಗೆ ಸಂಬಂಧಿಸಿ ೧೫ ಮಂದಿ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಕುಟ್ಟಿಕ್ಕೋಲ್ ಶ್ರೀ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ ಘಟನೆ ನಡೆದಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಪ್ರತೀ ವರ್ಷದಂತೆ ಈ ಬಾರಿಯೂ  ಕ್ಷೇತ್ರ ಪರಿಸರದಲ್ಲಿ ಧ್ವಜ, ತೋರಣಗಳಿಂದ ಅಲಂಕರಿಸಲಾಗಿತ್ತು. ೮ ಬೈಕ್‌ಗಳಲ್ಲಿ  ತಲುಪಿದ ೧೫ ಮಂದಿ ತಂಡ ಧ್ವಜ ತೋರಣಗಳನ್ನು ನಾಶಗೊಳಿಸಿದೆ. ಈ ವಿಷಯ ತಿಳಿದು ಆಚರಣೆ ಸಮಿತಿಗಳಿಗೆ ನೇತೃತ್ವ ನೀಡುವವರು ಸ್ಥಳಕ್ಕೆ ತಲುಪಿ ಹೊಸತಾಗಿ ತೋರಣಗಳನ್ನು ಸ್ಥಾಪಿಸಿದ್ದಾರೆ.

ಘರ್ಷಣೆ ಸಾಧ್ಯತೆಯನ್ನು ಪರಿಗಣಿಸಿ ಬೇಕಲ ಸಿ.ಐ. ಸಿ.ಕೆ. ಸುನಿಲ್ ಕುಮಾರ್ ಸ್ಥಳಕ್ಕೆ ತಲುಪಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದುದರಿಂದ ಸ್ಥಳದಲ್ಲಿ  ಸಂಘರ್ಷಾವಸ್ಥೆ ನಿವಾರಣೆಯಾಗಿದೆ. ಸ್ಥಳದಲ್ಲಿ ನಿನ್ನೆ ರಾತ್ರಿ ಪೊಲೀಸ್ ಕಾವಲು ಏರ್ಪಡಿಸಲಾಗಿತ್ತು.

RELATED NEWS

You cannot copy contents of this page