ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಈ ತಿಂಗಳ 19ರಿಂದ ನಡೆಯಲಿರುವ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಲಬಾರ್ ದೇವಸ್ವಂ ಬೋರ್ಡ್ ಅಸಿಸ್ಟೆಂಟ್ ಕಮಿಷನರ್ ಕೆ.ಪಿ. ಪ್ರದೀಪ್ ಕುಮಾರ್ ಬಿಡುಗಡೆಗೊಳಿಸಿ ದರು. ಆಡಳಿತ ಸಮಿತಿ ಟ್ರಸ್ಟಿ ಅಧ್ಯಕ್ಷ ಎ. ಗೋವಿಂದನ್ ನಾಯರ್, ವಾರ್ಡ್ ಪ್ರತಿನಿಧಿ ಎ. ಶ್ರೀಲತಾ ಟೀಚರ್, ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್, ಕೆ.ಎನ್. ವೆಂಕಟ್ರಮಣ ಹೊಳ್ಳ, ಎಂ. ಮಹೇಶ್, ಶೋಭಾ, ಅಭಿಲಾಷ್, ಅಜಿತೇಶ್, ಅರ್ಜುನನ್ ತಾಯಲಂಗಾಡಿ, ಉಷಾ ಅರ್ಜುನನ್, ಉಮೇಶ್ ಅಣಂಗೂರು, ಮನೋಜ್ ಎ.ಸಿ, ಹರೀಶ್ ಕೆ.ಆರ್. ಉಪಸ್ಥಿತರಿದ್ದರು.