ಸಂಪೂರ್ಣ ಜನಸುರಕ್ಷಾ ಯೋಜನೆ: ಕಾಸರಗೋಡು ಗುರಿ ಸಾಧಿಸಿದ ಜಿಲ್ಲೆಯಾಗಿ ನಾಳೆ ಘೋಷಣೆ
ಕಾಸರಗೋಡು: ಆರ್ಥಿಕವಾಗಿ ಹಿಂದುಳಿದಿರುವ ಹಿಂದುಳಿದ ವಿಭಾಗದವರಿಗೆ ಲೈಫ್, ಅಪಘಾತ ವಿಮೆ ನೀಡುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಯೋಜನೆಯಾದ ಪಿಎಂ ಜನ್ ಸುರಕ್ಷಾ ಯೋಜನೆಯಲ್ಲಿ ಜಿಲ್ಲೆ ಸಂಪೂರ್ಣ ಯಸ್ವಿಯಾಗಿದೆ ಎಂಬ ಘೋಷಣೆ ನಾಳೆ ನಡೆಯಲಿದೆ. ಕಾಸರಗೋಡು ಕೇರಳ ಬ್ಯಾಂಕ್ನ ಸಭಾಂಗಣದಲ್ಲಿ ಘೋಷಣಾ ಕಾರ್ಯ ಕ್ರಮವನ್ನು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಎಲ್ಲಾ ಮನೆಗಳಲ್ಲೂ ಜನ್ ಸುರಕ್ಷಾ ಯೋಜನೆ ತಲುಪಿಸು ವುದರಲ್ಲಿ ಲೀಡ್ ಬ್ಯಾಂಕ್ನೊಂದಿಗೆ ಜಿಲ್ಲಾಡಳಿತ, ಸ್ಥಳೀಯಾಡಳಿತ ಸಂಸ್ಥೆಗಳು ಸಹಕರಿಸಿವೆ. ವಯನಾಡು, ಪಾಲಕ್ಕಾಡ್ ಜಿಲ್ಲೆಗಳು ಈಗಾಗಲೇ ಈ ಸಾಧನೆ ಮಾಡಿವೆ.