ಸಂಬಂಧಿಕೆಯಾದ ಬಾಲಕಿಗೆ ಕಿರುಕುಳ: ಗಲ್ಫ್‌ಗೆ ಪರಾರಿ ವೇಳೆ ಆರೋಪಿ ಬಂಧನ

ಕಾಸರಗೋಡು:  ಪತ್ನಿಯ ಸಂಬಂ ಧಿಕೆಯಾದ 16ರ ಹರೆಯದ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರ ಲಾಗಿದೆ.  ಘಟನೆ ಬಹಿರಂಗ ಗೊಂಡೊ ಡನೆ ಗಲ್ಫ್‌ಗೆ ಪರಾರಿಯಾ ಗಲೆತ್ನಿಸಿದ ಆರೋಪಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಲ್ಲೂರಾವಿ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ೪೪ರ ಹರೆಯದ ಯುವಕನನ್ನು ಹೊಸದುರ್ಗ ಪೊಲೀಸರು ಸೆರೆಹಿಡಿದಿದ್ದಾರೆ. ಸಂಬಂಧಿಕೆಯಾದ ಬಾಲಕಿ  ರಾತ್ರಿ ಹೊತ್ತಿನಲ್ಲಿ ಆರೋ ಪಿಯ ಮನೆಯಲ್ಲಿ ನಿದ್ರಿಸುತ್ತಿದ್ದಳು. ಬಾಲಕಿ ನಿದ್ರಿಸುತ್ತಿದ್ದ ಕೊಠಡಿಗೆ ರಾತ್ರಿ ಹೊತ್ತಿನಲ್ಲಿ ನುಗ್ಗಿ ಕಿರುಕುಳ ನೀಡಿರುವುದಾಗಿ  ದೂರಲಾಗಿದೆ. ಗಲ್ಫ್‌ನಲ್ಲಿದ್ದ ಆರೋಪಿ ಒಂದು ತಿಂಗಳ ಹಿಂದೆ ಊರಿಗೆ ಬಂದಿದ್ದನು. ಅನಂತರ  ಮನೆಯಲ್ಲಿ ತಂಗುತ್ತಿದ್ದ ಬಾಲಕಿಗೆ ಆರೋಪಿ ಹಲವು ಬಾರಿ ಕಿರುಕುಳ ನೀಡಿದ್ದಾನೆಂದು ಹೇಳಲಾಗುತ್ತಿದೆ. ಇದರಿಂದ ನೊಂದುಕೊಂಡ ಬಾಲಕಿ ಶಾಲೆಗೆ ಹೋಗಿರಲಿಲ್ಲ. ಶಾಲಾ ಅಧಿಕಾರಿಗಳು ವಿಚಾರಿಸಿದಾಗ ಅಸೌಖ್ಯವೆಂದು ಬಾಲಕಿ ತಿಳಿಸಿದ್ದಳು. ಒಂದು ತಿಂಗಳಕಾಲ ಬಾಲಕಿ ಶಾಲೆಗೆ ತಲುಪದ ಹಿನ್ನೆಲೆಯಲ್ಲಿ ಸೋಮವಾರ ಖಡ್ಡಾಯವಾಗಿ ಶಾಲೆಗೆ ಬರಬೇ ಕೆಂದು ಬಾಲಕಿಯಲ್ಲಿತಿಳಿಸಲಾಗಿತ್ತು. ಇದರಂತೆ ಶಾಲೆಗೆ ಹೋದ ಬಾಲಕಿಯನ್ನು ಕೌನ್ಸಿಲಿಂಗ್‌ಗೆ ಒಳಪಡಿಸಿದಾಗ ಕಿರುಕುಳಕ್ಕೊಳಗಾದ ವಿಷಯವನ್ನು ಬಾಲಕಿ ತಿಳಿಸಿದ್ದಾಳೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

You cannot copy contents of this page