ಸಂಸ್ಕೃತಿ ಭವನದಲ್ಲಿ ಮಾದಕವಿರೋಧಿ ದಿನಾಚರಣೆ

ಬದಿಯಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮತ್ತು ಜನ ಜಾಗೃತಿ ವೇದಿಕೆ ಬದಿಯಡ್ಕ ಇದರ ಸಹಯೋಗದೊಂದಿಗೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಮಾದಕ ವಿರೋಧಿ ದಿನಾಚರಣೆ ನಡೆಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಬದಿಯಡ್ಕ ವಲಯದ ಅಧ್ಯಕ್ಷ ಅಖಿಲೇಶ್ ನಗುಮುಗಂ ಉದ್ಘಾಟಿ ಸಿದರು.
ಬದಿಯಡ್ಕ ಆರಕ್ಷಕ ಠಾಣೆಯ ಠಾಣಾಧಿಕಾರಿ ಶಿನು ಮಾತನಾಡಿದರು. ಒಕ್ಕೂಟದ ವಲಯ ಅಧ್ಯಕ್ಷ ರೋಹಿತಾಕ್ಷ ಅಧ್ಯಕ್ಷತೆ ವಹಿಸಿದ್ದರು. ಬಾಲಕೃಷ್ಣ ಸುವರ್ಣ ಬದಿಯಡ್ಕ, ವಲಯದ ಮೇಲ್ವಿಚಾರಕರಾದ ದಿನೇಶ್ ಕೊಕ್ಕಡ ಶುಭ ಹಾರೈಸಿದರು. ಸೇವಾಪ್ರತಿನಿಧಿಗಳಾದ ಜಲಜಾಕ್ಷಿ ಸ್ವಾಗತಿಸಿ, ಕಮಲಾಕ್ಷಿ ವಂದಿಸಿದರು.

You cannot copy contents of this page