ಸನ್‌ಶೇಡ್ ಸ್ಲ್ಯಾಬ್ ಕುಸಿದು ಬಿದ್ದು ಅದೃಷ್ಟವಶಾತ್ ತಪ್ಪಿದ ದುರಂತ: ಹಲವು ವಾಹನಗಳು ಹಾನಿ

ಕಾಸರಗೋಡು: ಕಟ್ಟಡ ಕಾಂಕ್ರೀಟ್ ನಿರ್ಮಿತ ಸನ್‌ಶೇಡ್ ಸ್ಲ್ಯಾಬ್ ಕುಸಿದು ಬಿದ್ದು ಸಂಭಾವ್ಯ ಭಾರೀ ದೊಡ್ಡ ಅನಾಹುತ ಅದೃಷ್ಟವಶಾತ್ ತಪ್ಪಿಹೋದ ಘಟನೆ ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆದಿದೆ.

ಹೊಸ ಬಸ್ ನಿಲ್ದಾಣ ಸಮೀಪವಿರುವ ಗೋಲ್ಡನ್ ಆರ್ಕೆಡ್ ಕಟ್ಟಡದ ಸನ್‌ಶೇಡ್ ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ದಿಢೀರ್ ಆಗಿ ಕುಸಿದು ಬಿದ್ದಿದೆ. ಆ ವೇಳೆ ಆ ಪರಿಸರದಲ್ಲಿ ಯಾರೂ ಇದ್ದಿರಲಿಲ್ಲ. ಅದರಿಂದಾಗಿ ಸಂಭಾವ್ಯ ಭಾರೀ ದೊಡ್ಡ ದುರಂತವೊಂದು ತಪ್ಪಿಹೋದಂತಾಗಿದೆ.

ಸನ್‌ಶೇಡ್ ಸ್ಲ್ಯಾಬ್ ಅಲ್ಲೇ ಪಕ್ಕದಲ್ಲಿ ಸಾಲಾಗಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದೆ. ಇದರಿಂದಾಗಿ ನಾಲ್ಕರಷ್ಟು ದ್ವಿಚಕ್ರ ವಾಹನಗಳು ಹಾನಿಗೊಂಡಿವೆ. ಇದರಲ್ಲಿ ಎರಡು ವಾಹನ ಪೂರ್ಣ ವಾಗಿ ನಜ್ಜುಗುಜ್ಜಾಗಿದೆ. ಹೊಸ ಬಸ್ ನಿಲ್ದಾಣದ ಮೇಲೆ ಸ್ಥಾಪಿಸಲಾಗಿದ್ದ ಬೃಹತ್ ಜಾಹೀರಾತು ಫಲಕವೊಂ ದು ಮೇ 12ರಂದು ಸಂಜೆ ಕುಸಿದು ಬಿದ್ದಿತ್ತು. ಅಂದೂ ಯಾವುದೇ ಅನಾಹುತ ಉಂಟಾಗಲಿಲ್ಲ. ಹಲವರು ಸಣ್ಣ ಪುಟ್ಟ ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಅಲ್ಲೆ ಪಕ್ಕದ ಕಟ್ಟಡದ ಸನ್‌ಶೇಡ್ ಸ್ಲ್ಯಾಬ್ ಕುಸಿದು ಬಿದ್ದಿದೆ.

RELATED NEWS

You cannot copy contents of this page